Tuesday, December 3, 2024
spot_imgspot_img
spot_imgspot_img

ಕಡಬ: ಪವರ್ ಮ್ಯಾನ್‌ಗೆ ವಿದ್ಯುತ್ ಶಾಕ್ ತಗುಲಿ ಮೃತ್ಯು ಪ್ರಕರಣ.! – ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಕಡಬ: ವಿದ್ಯುತ್ ಕಂಬದಲ್ಲಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ಪವರ್ ಮ್ಯಾನ್ ಗೆ ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗೊಂಡು ಅಸುನೀಗಿದ ಘಟನೆ ನಡೆದಿದೆ. ಈ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಎಂಬಲ್ಲಿ ಗುರುವಾರ (ಜೂ 1) ನಡೆದಿದೆ. ಈ ಬಗ್ಗೆ ಮೃತಪಟ್ಟ ಯುವಕನ ತಂದೆ ನೀಡಿದ ದೂರಿನ ಅನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಮೃತಪಟ್ಟ ಪವರ್ ಮ್ಯಾನ್. ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗಿತ್ತು. ಇದರ ದುರಸ್ತಿಗೆಂದು ಕಂಬ ಏರಿದ್ದರು. ಈ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿ ಶಾಕ್ ಹೊಡೆದಿದೆ.

ವಿದ್ಯುತ್ ಶಾಕ್ ಹೊಡೆದ ಹಿನ್ನಲೆ ಕೆಲ ಕಾಲ ಕಂಬದಲ್ಲೆ ಲೈನ್ ಮ್ಯಾನ್ ಉಳಿದಿದ್ದರು ಎನ್ನಲಾಗಿದೆ. ಬಳಿಕ ಸ್ಥಳೀಯರು ಮರದ ಕೋಲಿನ ಸಹಾಯದಿಂದ ಅವರನ್ನು ಕೆಳಗಿಳಿಸಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಯುವಕನ ತಂದೆಯಿಂದ ದೂರು
ವಿದ್ಯುತ್‌ ದುರಸ್ಥಿ ಮಾಡುವ ಸ್ಥಳದಲ್ಲಿ ಎರಡು ಟ್ರಾನ್ಸಫಾರ್ಮ್ಗಳ ಎರಡು ಲೈನ್‌ಗಳು ಹಾದು ಹೋಗಿದ್ದು ಒಂದು ಲೈನ್‌ ಆಫ್‌ ಮಾಡಿದ್ದು ಮತ್ತೊಂದು ಲೈನ್‌ ವಿದ್ಯುತ್‌ ಪ್ರವಹಿಸಿರುವುದರಿಂದ ಮೃತಪಟ್ಟಿರುವುದಾಗಿರುತ್ತದೆ. ನನ್ನ ಮಗನ ಜೊತೆಗೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕ್ಕೆ ಯಾರನ್ನೂ ಜೊತೆಗೆ ಕಳುಹಿಸದೇ ಹಾಗೂ ಹೆಲ್ಮೇಟ್‌ ಹ್ಯಾಂಡ್‌ಗ್ಲೌಸ್‌, ಶೂ, ಯಾವುದೇ ಸೇಫ್ಟಿ ಸಾಮಗ್ರಿಗಳನ್ನು ನೀಡದೇ ನಿರ್ಲಕ್ಷತನದಿಂದ ವರ್ತಿಸಿದ್ದಾರೆ. ಮಗನ ಸಾವಿಗೆ ಕಾರಣರಾದ ಮೆಸ್ಕಾಂ ಕಡಬದ ಸಹಾಯಕ ಇಂಜಿನಿಯರ್‌ ಆದ ಸತ್ಯನಾರಾಯಣ ಸಿ ಕೆ ಮತ್ತು ಕಿರಿಯ ಇಂಜಿನಿಯರ್‌ ವಸಂತ ರವರ ಮೇಲೆ ಮೊಕದ್ದಮ್ಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!