Sunday, July 6, 2025
spot_imgspot_img
spot_imgspot_img

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರಾ ,ಮಹೋತ್ಸವ

- Advertisement -
- Advertisement -

ಮಹಾರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಭಕ್ತಸಾಗರ

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರಾ ,ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಜನವರಿ 14 ರಂದು ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ಬಳಿಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು. ಜನವರಿ 18 ರಂದು ಬಯ್ಯದ ಬಲಿ ಉತ್ಸವ, ಜ. 19 ರಂದು ನಡುದೀಪೋತ್ಸವ ಕೆರೆ ಆಯನ, ಜ. 20 ರಂದು ಹೂತೇರು ಮತ್ತು ಜ. 21 ರಂದು ಮಹಾರಥೋತ್ಸವ ನಡೆಯಿತು.
ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಲವು ನಾಟಕ ತಂಡಗಳಿಂದ ನಾಟಕ ಪ್ರದರ್ಶನ, ಯಕ್ಷಗಾನ ಬಯಲಾಟ, ಸಂಗೀತ ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಜ. 21 ರಂದು ಶ್ರೀ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ ನಡೆದು ಬಳಿಕ ರಾತ್ರಿ ವೈಭವದ ಮಹಾರಥೋತ್ಸವ ನಡೆಯಿತು. ಮಹಾರಥೋತ್ಸವದಲ್ಲಿ ಆಕರ್ಷಣೀಯ ಸುಡುಮದ್ದು ಪ್ರದರ್ಶನ, ವಿಟ್ಲ ಬೆಡಿ ಪ್ರದರ್ಶನಗೊಂಡಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.

- Advertisement -

Related news

error: Content is protected !!