Wednesday, June 17, 2026
spot_imgspot_img
spot_imgspot_img

ಮಂಗಳೂರು: ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದ ಕಳತ್ತೂರು ವಿಶ್ವನಾಥ ಶೆಟ್ಟಿ

- Advertisement -
- Advertisement -
vtv vitla
vtv vitla

ಮಂಗಳೂರು : ಮಂಗಳೂರು ನಗರದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿರುವ ರೋಹನ್ ಕಾರ್ಪೊರೇಶನ್ ವತಿಯಿಂದ ಕಿನ್ನಿಗೋಳಿ ಸಮೀಪದ ಪಕ್ಷಿ ಕೆರೆಯ ‘ರೋಹನ್ ಎಸ್ಟೇಟ್’ನಲ್ಲಿ ‘ಸೋನು ನಿಗಮ್ ಲೈವ್ ಇನ್ ಕಾನ್ಸರ್ಟ್’ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ರಾಷ್ಟ್ರವಾದಿ ಕಾಂಗ್ರೆಸ್‌ನ ಅಧ್ಯಕ್ಷ ಕಳತ್ತೂರು ವಿಶ್ವನಾಥ ಶೆಟ್ಟಿ ಅವರು ಆತ್ಮೀಯವಾಗಿ ಸ್ವಾಗತಿಸಿಕೊಂಡರು.

ಸೋನು ನಿಗಮ್ ಲೈವ್ ಇನ್ ಕಾನ್ಸರ್ಟ್ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಮನಸೂರೆಗೊಂಡರು. ರೋಹನ್ ಕಾರ್ಪೊರೇಶನ್ ಸಂಸ್ಥೆಯು ಪಕ್ಷಿಕೆರೆಯಲ್ಲಿರುವ 32 ಎಕರೆ ಪ್ರದೇಶದಲ್ಲಿ 372 ನಿವೇಶನಗಳನ್ನು ಒಳಗೊಂಡ ‘ರೋಹನ್ ಎಸ್ಟೇ ಟ್’ ವಸತಿ ಬಡಾವಣೆಯನ್ನು ನಿರ್ಮಿಸಿದೆ. ಅತ್ಯಾಧುನಿಕ ಸಕಲ ಸೌಕರ್ಯಗಳೊಂದಿಗೆ ಪೂರ್ಣಗೊಂಡಿರುವ ಈ ಬಡಾವಣೆ ಹಾಗೂ ಅದರಲ್ಲಿನ ಸೌಕರ್ಯಗಳನ್ನು ಮಂಗಳೂರು ಮತ್ತು ಆಸುಪಾಸಿನ ಜನರಿಗೆ ಪರಿಚಯಿಸುವುದಕ್ಕಾಗಿ ಆಯೋಜಿಸಲಾದ ಸೋನು ನಿಗಮ್ ಲೈವ್ ಇನ್ ಕಾನ್ಸರ್ಟ್ ಐದು ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು.

- Advertisement -

Related news

error: Content is protected !!