Thursday, October 10, 2024
spot_imgspot_img
spot_imgspot_img

ಕಂಬಳಬೆಟ್ಟು-ಧರ್ಮನಗರ: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಬ್ರಹ್ಮಕಲಶೋತ್ಸವದ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮ; ಸಾಮಾಜಿಕ ಜಾಲತಾಣ ಖಾತೆಯ ಪ್ರಾರಂಭಕ್ಕೆ ಚಾಲನೆ

- Advertisement -
- Advertisement -

ಕಂಬಳಬೆಟ್ಟು-ಧರ್ಮನಗರ: ಡಿಸೆಂಬರ್‌ 21 ರಿಂದ 25 ರವರೆಗೆ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ದಿನಾಂಕ 8/9/2024 ರಂದು ಬೆಳಗ್ಗೆ ಧರ್ಮನಗರ ಶ್ರೀ ಜಯದುರ್ಗೆ ಸನ್ನಿಧಿಯಲ್ಲಿ ಮತ್ತು ಶ್ರೀ ಮಹಾಗಣಪತಿಗೆ ಸಮರ್ಪಿಸಲಾಯಿತು. ಬಳಿಕ ಇಡ್ಕಿದು ಸೇವಾ ಸಹಕಾರಿ ಸಂಘದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬಂಧ ಪಟ್ಟ ಸಾಮಾಜಿಕ ಜಾಲತಾಣ ಖಾತೆಯ ಪ್ರಾರಂಭಕ್ಕೆ ಚಾಲನೆ ನೀಡಲಾಯಿತು.

ಕಾರ್ಯಾಲಯದ ಉದ್ಘಾಟನೆಯನ್ನು ಸುಬ್ರಮಣ್ಯ ಭಟ್ ಉರಿಮಜಲು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಸಾಮಾಜಿಕ ಜಾಲತಾಣ ಖಾತೆಯ ಪ್ರಾರಂಭಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ಉಪಸ್ಥಿತರಿದ್ದರು. ಉದ್ಯಮಿ ನೇರ್ಲಾಜೆ ದಿವಾಕರ ದಾಸ್ ರವರನ್ನು ಸ್ವಾಗತ ಸಮಿತಿಗೆ ಗೌರವ ಪೂರ್ವಕವಾಗಿ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಕೆಟಿ ವೆಂಕಟೇಶ್ವರ ರವರು ಸ್ವಾಗತಿಸಿದರು.

ಕಛೇರಿ ನಿರ್ವಹಣೆಯನ್ನು ಕಾರ್ಯಕರ್ತರದ ಸಾಂತಪ್ಪ ಗೌಡ ಕಾರ್ಯಾಡಿ ಯವರಿಗೆ ವಹಿಸಲಾಯಿತು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮೂಡೈಮಾರ್, ಕಾರ್ತಿಕ್ ಶೆಟ್ಟಿ ಮೂಡೈಮಾರ್, ಬ್ರಹ್ಮಕಲಶೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ ವಸಂತ ಕುಮಾರ್ ಅಮೈ , ಉಪಾಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು , ಕಾರ್ಯದರ್ಶಿ ಮೋಹನ್ ಭಟ್ ಉರಿಮಜಲು , ಕೋಶಾದಿಕಾರಿ ಸುರೇಂದ್ರ ಪೂಜಾರಿ ಕಾರ್ಯಾಡಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

800 ವರ್ಷಗಳ ಇತಿಹಾಸ ಹೊಂದಿರುವ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಕ್ಷೇತ್ರದದಲ್ಲಿ ಡಿಸೆಂಬರ್ 21, 22 23 ರ0ದು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ. ಡಿ. 24 ಮತ್ತು ಡಿ. 25 ರಂದು ಸಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

- Advertisement -

Related news

error: Content is protected !!