



ಬಡಕುಟುಂಬಗಳಿಗೆ ಸೂರು, ಆರ್ಥಿಕ ನೆರವು, ಅನಾರೋಗ್ಯ ಪೀಡಿತರಿಗೆ ಚಿಕಿತ್ಸಾ ವೆಚ್ಚಗಳನ್ನು ನೀಡುವುದರ ಮೂಲಕ ಜನಮನ್ನಣೆಗೆ ಪಾತ್ರವಾದ ಸಿದ್ದಿವಿನಾಯಕ ಯುವಕ ಮಂಡಲ
ಸಿದ್ದಿವಿನಾಯಕ ಯುವಕ ಮಂಡಲ (ರಿ) ಕಂಬಳಬೆಟ್ಟು ಕಳೆದ ಸುಮಾರು ವರ್ಷಗಳ ಹಿಂದಿನಿಂದಲೇ ಸಮಾಜದಲ್ಲಿ ನೋವು ನಲಿವುಗಳಿಗೆ ಸ್ಪಂದಿಸುತ್ತಾ, ಬಡ ಕುಟುಂಬಗಳಿಗೆ ಸೂರನ್ನು ಕಲ್ಪಿಸುವುದರ ಮೂಲಕ ಹಾಗೂ ಆರ್ಥಕವಾಗಿ ಸಂಕಷ್ಟದಲ್ಲಿರುವ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ನೆರವಾಗುವುದರ ಮೂಲಕ ತನ್ನನ್ನು ತಾನು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿರುವ ಸಂಘವಾಗಿದೆ.
ಪ್ರತೀ ವರ್ಷವೂ ವಿಶೇಷ ಯೋಜನೆಗಳನ್ನು ರೂಪಿಸಿಕೊಂಡು, ಅವುಗಳನ್ನು ಕಾರ್ಯರೂಪದ ಮೂಲಕ ಸೇವೆಯಾಗಿ ನೂರಾರು ಬಡವರ ಬಾಳಿಗೆ, ಹಾಗೂ ಸಮಾಜಕ್ಕೆ ಬೆಳಕಾಗಿ ನಿಂತಿದೆ. ಸ್ಥಳೀಯರಿಗೆ ಚಿಕಿತ್ಸೆಯ ಸಲುವಾಗಿ ಆರ್ಥಿಕ ನೆರವು ನೀಡಿಕೆ, ಹಾಗೂ ವಿವಿಧ ಸಾಮಾಜಿಕ ಶ್ರಮದಾನ ಕಾರ್ಯಗಳನ್ನು ನಡೆಸುವುದರ ಮೂಲಕ ಸಿದ್ದಿವಿನಾಯಕ ಯುವಕ ಮಂಡಲ ಜನಮನ್ನಣೆಗೆ ಪಾತ್ರವಾಗಿದೆ.
ಸಿದ್ದಿವಿನಾಯಕ ಯುವಕ ಮಂಡಲದ ಸೇವಾ ಯೋಜನೆಯಿಂದ ಇತ್ತೀಚೆಗೆ ನೂಜಿ ನಿವಾಸಿ ಸೇಸಕ್ಕ ಎಂಬವರಿಗೆ ದಾನಿಗಳ ಸಹಕಾರದೊಂದಿಗೆ ನೂತನ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದು, ಮನೆಯ ನಿರ್ಮಾಣ ಕಾರ್ಯದ ಬಳಿಕ ನೂತನ ಮನೆಯ ಗೃಹಪ್ರವೇಶವನ್ನು ಬಹಳ ಅದ್ದೂರಿಯಾಗಿ ನೆರವೇರಿಸಲಾಗಿತ್ತು. ಈ ಮೂಲಕ ಬಡಕುಟುಂಬದ ಬಾಳಿಗೆ ಬೆಳಕಾಗಿ ನಿಂತಿದೆ ಸಿದ್ದಿವಿನಾಯಕ ಯುವಕ ಮಂಡಲ.
ಸಿದ್ದಿವಿನಾಯಕ ಯುವಕ ಮಂಡಲದ ಸೇವಾ ಯೋಜನೆಯಿಂದ ದಿ|| ಕ.ಶಿ .ವಿಶ್ವನಾಥ ಸ್ಮರಣಾರ್ಥ ವಿಟ್ಲ ಪುತ್ತೂರು ಕಂಬಳಬೆಟ್ಟು ರಸ್ತೆಯ ದೇವಸ್ಯದಲ್ಲಿ ನೂತನ ಬಸ್ ತಂಗುದಾಣ ನಿರ್ಮಾಣವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಮೂಲಕ ಪ್ರಯಾಣಿಕರಿಗೆ ತಂಗುದಾಣವನ್ನು ಕಲ್ಪಿಸಿಕೊಡುವುದರ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.