ಮೆಲ್ಕಾರ್ : ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಫ್ರೆಂಡ್ಸ್ ಟ್ರಸ್ಟ್ ಪೂರ್ವಾಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸದಸ್ಯರಾದ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಹಾಗೂ ಎನ್ನಾರೈ ಸದಸ್ಯರಾದ ಅಬ್ದುಲ್ಲ ಮೊಯ್ದೀನ್ ಕತಾರ್ ಅವರನ್ನು ಸನ್ಮಾನಿಸಲಾಯಿತು.
ಶುಕ್ರವಾರ (01-11-24) ಮೆಲ್ಕಾರ್ ರಿಫಾಯಿ ಕಛೇರಿಯಲ್ಲಿ ನಡೆದ ಎಂ.ಫ್ರೆಂಡ್ಸ್ ಸಭೆಯಲ್ಲಿ ಈ ಮೂವರು ಎಂ.ಫ್ರೆಂಡ್ಸ್ ಟ್ರಸ್ಟ್ ಸದಸ್ಯರನ್ನು ಗೌರವಿಸಲಾಯಿತು. ಎಂ.ಫ್ರೆಂಡ್ಸ್ ಕಾರ್ಯಾಧ್ಯಕ್ಷ ಸುಜಾಹ್ ಮಹಮ್ಮದ್ ಅಧ್ಯಕ್ಷತೆ ವಹಿಸಿದರು. ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ಅಭಿನಂದನಾ ಮಾತನ್ನಾಡಿದರು. ಸನ್ಮಾನಿತರಾದ ಮಹಮ್ಮದ್ ಹನೀಫ್ ಹಾಜಿ ಹಾಗೂ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಮಾತನಾಡಿದರು. ಉಪಾಧ್ಯಕ್ಷರಾದ ವಿ.ಎಚ್. ಅಶ್ರಫ್, ಅಬೂಬಕರ್ ಪುತ್ತು ಉಪ್ಪಿನಂಗಡಿ ಹಾಗೂ ಡಾ. ಮುಬಶ್ಶಿರ್, ಪ್ರಧಾನ ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಜೊತೆ ಕಾರ್ಯದರ್ಶಿ ಶೇಕ್ ಇಸಾಕ್ ಹಾಗೂ ಅನ್ವರ್ ಹುಸೈನ್ ಗೂಡಿನಬಳಿ, ಕೋಶಾಧಿಕಾರಿ ಝುಬೈರ್ ಡ್ರೀಮ್, ಮಹಮ್ಮದ್ ಶರೀಫ್ ಮೂಡಬಿದ್ರೆ, ಅಬೂಬಕರ್ ನೋಟರಿ, ಕಲಂದರ್ ಪರ್ತಿಪಾಡಿ ಉಪಸ್ಥಿತರಿದ್ದರು