Friday, May 20, 2022
spot_imgspot_img
spot_imgspot_img

ತಂದೆ ಶವ ಸಂಸ್ಕಾರಕ್ಕೆ ಹೂ ತರಲು ಹೋದ ಮಗ ದುರ್ಮರಣ

- Advertisement -
- Advertisement -

ಕಾರವಾರ: ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿ ನಗರದ ಎಸ್‍ಬಿಐ ಸರ್ಕಲ್ ಬಳಿ ನಡೆದಿದೆ.

ಶಿರಸಿಯ ಗಣೇಶ ನಗರದ ನಿವಾಸಿಗಳಾದ ರವಿಚಂದ್ರ ವಡ್ಡರ್ (34), ಸುನೀಲ ಇಂದೂರ (26) ಮೃತರಾಗಿದ್ದಾರೆ. ಇಬ್ಬರು ಯುವಕರು ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಬಸ್ ಬಂದು ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರವಿಚಂದ್ರ ತಂದೆ ಹನುಮಂತಪ್ಪ ಇಂದು ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಹೂ ತರಲು ಇಬ್ಬರು ಮಾರುಕಟ್ಟೆಗೆ ತೆರಳುತ್ತಿದ್ದರು.

ಈ ವೇಳೆ ಇನ್ನೊಂದು ರಸ್ತೆಯಿಂದ ಬಂದ ಬಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‍ನಲ್ಲಿದ್ದ ಯುವಕರಿಬ್ಬರು ಬಸ್ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!