Sunday, June 14, 2026
spot_imgspot_img
spot_imgspot_img

ಕಾರ್ಕಳ: ನ್ಯಾಯಾಲಯಕ್ಕೆ ಹಾಜರಾಗದೆ 34 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌..!

- Advertisement -
- Advertisement -

ಕಾರ್ಕಳ: ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು 34 ವರ್ಷ ಬಳಿಕ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ತೆಂಕ ಎಡಪದವಿನ ಲಿಯೋ ರೋಚ್ (64) ಎಂದು ಗುರುತಿಸಲಾಗಿದೆ.

ಈತನ ವಿರುದ್ಧ 2004ರಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈತನ ಮೇಲೆ ನ್ಯಾಯಾಲಯವು LPC ವಾರೆಂಟು ಹೊರಡಿಸಿತ್ತು.

ಎ.ಎಸ್.ಪಿ ಕಾರ್ಕಳ ಹರ್ಷ ಪ್ರಿಯವಂದಾ ರವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಮಂಜಪ್ಪ ಡಿ ಹಾಗೂ ಕಾರ್ಕಳ ನಗರ ಠಾಣಾ ಪಿಎಸ್ಐಗಳಾದ ಸಂದೀಪ್ ಕುಮಾರ್ ಶೆಟ್ಟಿ ಹಾಗು ಶಿವಕುಮಾರ್ ಎಸ್.ಆರ್ ರವರ ಸೂಚನೆಯಂತೆ ಕಾರ್ಕಳ ನಗರ ಠಾಣೆಯ ಹೆಚ್.ಸಿ ರಮೇಶ್ ಹೆಚ್. ಹಾಗೂ ಪಿಸಿ ದರ್ಶನ್ ಅವರು ವಾರೆಂಟ್ ಅಸಾಮಿ ತೆಂಕ ಎಡಪದವಿನ ಲಿಯೋ ರೋಚ್ (64). ನನ್ನು ಮಾರ್ಚ್ 19 ರಂದು ಇವರು ವಾರೆಂಟ್ ಅಸಾಮಿಯನ್ನು ಮಂಗಳೂರಿನ ಪಜೀರ್‌‌ನಲ್ಲಿ ಬಂಧಿಸಿದ್ದಾರೆ. ಆರೋಪಿಗೆ ಕಾರ್ಕಳ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!