- Advertisement -
- Advertisement -
ಕಾರ್ಕಳ: ಮಹಿಳೆಯೊಬ್ಬರ ಎಟಿಎಂ ಬದಲಾಯಿಸಿ ಸಾವಿರಾರು ರೂ. ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕುಂದೂರು ಗ್ರಾಮದ ರಫೀಕ್ ಆಹ್ಮದ್ ಎಂಬವರ ಪತ್ನಿ ಸಮೀನಾ ಬೇಗಂ ಸೆ.16ರಂದು ಎಟಿಎಂನಿಂದ ಹಣ
ಪಡೆಯಲು ಕುಕ್ಕುಂದೂರು ಜೋಡುರಸ್ತೆ ಎಂಬಲ್ಲಿಯ ಎಂಟಿಎಂ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿ ಹಣ ತೆಗೆಯಲು
ಹೋದಾಗ ಎರಡು ಜನ ಅಪರಿಚಿತ ವ್ಯಕ್ತಿಗಳಿದ್ದು, ಅವರು ಸಮೀನಾ ಅವರ ಗಮನವನ್ನು ಬೇರೆ ಕಡೆ ಸೆಳೆದು ಅವರ
ಗಮನಕ್ಕೆ ಬಾರದಂತೆ ಎಟಿಎಂ ಕಾರ್ಡ್ ಬದಲಾವಣೆ ಮಾಡಿದರೆನ್ನಲಾಗಿದೆ.
ನಂತರ ಕಳ್ಳರು, ಸಮೀನಾ ಅವರಿಗೆ ಸೇರಿದ ಎಟಿಎಂ ಕಾರ್ಡನ್ನು ಬಳಸಿಕೊಂಡು ಕಾರ್ಕಳ ಬಂಡಿಮಠ ಎಂಬಲ್ಲಿರುವ ಎಂಟಿಎಂನಿಂದ 70,000 ರೂ. ಡ್ರಾ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.
- Advertisement -