Friday, April 26, 2024
spot_imgspot_img
spot_imgspot_img

ಕೊರೊನಾ ಸೋಂಕಿತರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಕರ್ನಾಟಕ

- Advertisement -G L Acharya panikkar
- Advertisement -

ಬೆಂಗಳೂರು: ಕ್ರೂರಿ ಕೊರೊನಾ ಹೊಡೆತಕ್ಕೆ ಕರುನಾಡು ನಲುಗಿ ಹೋಗಿದೆ. ನಿನ್ನೆ ಒಂದೇ 3,176 ಮಂದಿ ಮೇಲೆ ಅಟ್ಯಾಕ್ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ. ಈ ಹೊತ್ತಲ್ಲೆ ಮತ್ತೊಂದು ಆಘಾತಕಾರಿ ಸುದ್ದಿಯೊಂದನ್ನು ಆರೋಗ್ಯ ಇಲಾಖೆ ನೀಡಿದೆ. ಅದೇನೆಂದರೆ ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ ಗುಜರಾತ್ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಬಂತು ನಿಂತಿದೆ.

ಮಹಾರಾಷ್ಟ್ರ,ತಮಿಳುನಾಡು,ದೆಹಲಿಯಲ್ಲಿ ಮೊದಲ ಮೂರು ಸ್ಥಾನದಲ್ಲಿದೆ. ಆದರೆ ಕಳೆದ 5 ದಿನಗಳಲ್ಲಿ 13,835 ಮಂದಿ ಕೊರೊನಾ ಕೂಪಕ್ಕೆ ಬಿದ್ದಿದ್ದು, ಕೊರೊನಾ ಸೋಂಕಿತರ ಸಂಖ್ಯೆ ತ್ರೀವ್ರಗತಿಯಲ್ಲಿ ಏರಿಕೆಯಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಇಲ್ಲಿಯವರೆಗೆ 928 ಮಂದಿ ಕೊರೊನಾದಿಂದ ಉಸಿರು ಚೆಲ್ಲಿದ್ದಾರೆ. ಅದ್ರಲ್ಲೂ ಕಳೆದ 5 ದಿನದಲ್ಲಿ 388 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರತಿ ದಿನ ಸಾವಿರದ ಗಡಿ ದಾಟಿ ಕೊರೊನಾ ರಣಕೇಕೆ ಹಾಕುತ್ತಿದೆ. ಒಂದು ವೇಳೆ ಈ ವೇಗಕ್ಕೆ ಕಡಿವಾಣ ಬೀಳದಿದ್ರೆ ಕೆಲವೇ ದಿನದಲ್ಲಿ 1 ಲಕ್ಷ ಗಡಿ ತಲುಪುದರಲ್ಲಿ ಅಚ್ಚರಿ ಇಲ್ಲ.

- Advertisement -

Related news

error: Content is protected !!