Tuesday, July 1, 2025
spot_imgspot_img
spot_imgspot_img

ಐತಿಹಾಸಿಕ ನಿರ್ಧಾರವನ್ನು ಕೈಗೊಂಡ ಕರ್ನಾಟಕ ಹೈಕೋರ್ಟ್ ಇನ್ಮುಂದೆ ಕಲಾಪ ನೇರಪ್ರಸಾರ

- Advertisement -
- Advertisement -

ಬೆಂಗಳೂರು : ರಾಜ್ಯದ ಹೈಕೋರ್ಟ್ ನಿಂದ ಮಹತ್ವದ ಐತಿಹಾಸಿಕ ನಿರ್ಧಾರವನ್ನು ಸಿಜೆ ಕೈಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯದ ಜನರು ಮನೆಯಲ್ಲಿಯೇ ಕುಳಿತು ಹೈಕೋರ್ಟ್ ಕಲಾಪವನ್ನು ನೇರಪ್ರಸಾರದ ಮೂಲಕ ವೀಕ್ಷಿಸುವಂತ ವ್ಯವಸ್ಥೆ ಮಾಡಿದ್ದಾರೆ

ಹೌದು.. ರಾಜ್ಯ ಹೈಕೋರ್ಟ್ ಹಾಲ್ ನಂ.೧ರಲ್ಲಿ ನಡೆಯುವಂತ ಕಲಾಪಗಳ ನೇರ ಪ್ರಸಾರವನ್ನು ಯೂಟ್ಯೂಬ್ ಮೂಲಕ,ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದಾಗಿದೆ.

ಈ ಕುರಿತಂತೆ ರಾಜ್ಯ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾರ ಅವರು ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಜನಸಾಮಾನ್ಯರಿಗೆ ಹೈಕೋರ್ಟ್ ಕಲಾಪವನ್ನು ನೇರವಾಗಿ ವೀಕ್ಷಿಸುವಂತ ನಿರ್ಧಾರವನ್ನು ಕೈಗೊಂಡಿದ್ದಾರೆ. ಇಂದು ಹೈಕೋರ್ಟ್ ಹಾಲ್ ನಂ.೧ರ ಕಲಾಪವನ್ನು ಯೂಟ್ಯೂಬ್ ಮೂಲಕ, ಪ್ರಾಯೋಗಿಕವಾಗಿ ನೇರ ಪ್ರಸಾರ ಮಾಡಲಾಗಿದೆ.


ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪದ ನೇರ ಪ್ರಸಾರವನ್ನು ಮಾಡಲಾಗಿದೆ. ಈಗಾಗಲೇ ಮಧ್ಯಪ್ರದೇಶ ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡ ಕಲಾಪದ ನೇರಪ್ರಸಾರದ ಚಿಂತನೆ ನಡೆಸಿದೆ. ಇದರ ಮಧ್ಯೆ ರಾಜ್ಯ ಹೈಕೋರ್ಟ್ ಕಲಾಪವನ್ನು ನೇರ ಪ್ರಸಾರದ ಮೂಲಕ, ಜನಸಾಮಾನ್ಯರೂ ವೀಕ್ಷಿಸುವಂತ ವ್ಯವಸ್ಥೆ ಮಾಡಲಾಗಿದೆ.

ಇಂದಿನಿ0ದ ಕರ್ನಾಟಕ ಹೈಕೋರ್ಟ್ ಹಾಲ್ ನಂ.೧ರ ಕೋರ್ಟ್ ಕಲಾಪದ ಪ್ರಾಯೋಗಿಕ ನೇರ ಪ್ರಸಾರ ಆರಂಭಗೊ0ಡಿದ್ದು, ಜನ ಸಾಮಾನ್ಯರು ಯೂಟ್ಯೂಬ್ ನಲ್ಲಿ ಹೈಕೋರ್ಟ್ ಹಾಲ್ ನಂ.೧ರ ಕಲಾಪವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಬಹುದಾಗಿದೆ.

driving
- Advertisement -

Related news

error: Content is protected !!