Wednesday, April 24, 2024
spot_imgspot_img
spot_imgspot_img

ಅಕ್ರಮ ಆಸ್ತಿ ಗಳಿಕೆ ಆರೋಪ: ಬಿಡಿಎ ಭ್ರಷ್ಟ ಅಧಿಕಾರಿ ತಲೆದಂಡ-ಕೆಎಎಸ್ ಅಧಿಕಾರಿ ಸುಧಾ ವಿರುದ್ಧ ಸರ್ಕಾರ ಕಟು ನಿರ್ಧಾರ

- Advertisement -G L Acharya panikkar
- Advertisement -

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕೆಎಎಸ್ ಅಧಿಕಾರಿ ಸುಧಾ ವಿರುದ್ಧ ಸರ್ಕಾರ ಕಟು ನಿರ್ಧಾರ ಕೈಗೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿ ತಲೆದಂಡವಾಗಿದೆ. ಕೋಟಿ ಕೋಟಿ ಅಕ್ರಮ ಆಸ್ತಿ ದಾಖಲೆ, ಅಕ್ರಮ ಹಣ ಸಂಪಾದನೆ ಆರೋಪದಡಿಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಬಿಡಿಎ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸುಧಾ ಮನೆ ಮೇಲೆ, ಇತ್ತೀಚೆಗೆ ಎರಡು ಬಾರಿ ಎಸಿಬಿ ರೇಡ್ ಮಾಡಿತ್ತು.


ರೇಡ್ ಮಾಡಿದ್ದ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ದಾಖಲೆ ಪತ್ತೆಯಾಗಿತ್ತು. ಅಲ್ಲದೆ, ಬ್ರೋಕರ್​ಗಳ ಜೊತೆ ಸೇರಿಕೊಂಡು ಅಕ್ರಮ ಹಣ ಸಂಪಾದಿಸಿದ್ದ ಆರೋಪವನ್ನು ಕೂಡ ಸುಧಾ ಹೊತ್ತಿದ್ದರು.

ಈ ಸಂಬಂಧ, ಕೆಲ ವರ್ಷಗಳ ಹಿಂದೆ ಎಸಿಬಿಗೆ ಖಾಸಗಿ ವ್ಯಕ್ತಿಗಳಿಂದ ದೂರು ದಾಖಲಾಗಿತ್ತು. ದೂರಿನ ಅನ್ವಯ ಇತ್ತೀಚೆಗೆ ಎಸಿಬಿ ದಾಳಿ ನಡೆಸಿತ್ತು. ಇದೀಗ, ಅಮಾನತು ಕುರಿತು ದೂರುದಾರ ಟಿ.ಜೆ. ಅಬ್ರಹಾಂ ಮಾಹಿತಿ ನೀಡಿದ್ದಾರೆ. ಡಿಪಿಎಆರ್​ನಿಂದ ಖಚಿತ ಮಾಹಿತಿ ದೊರಕಿದೆ. ಇನ್ನು ಅಮಾನತು ಆದೇಶದ ಪ್ರತಿ ಸುಧಾ ಕೈಸೇರುವೊದೊಂದೇ ಬಾಕಿ ಉಳಿದಿದೆ.

- Advertisement -

Related news

error: Content is protected !!