- Advertisement -
- Advertisement -


ಕಾಸರಗೋಡು: ಉಯ್ಯಾಲೆ ಕುತ್ತಿಗೆಗೆ ಬಿಗಿದು ಬಾಲಕನೋರ್ವ ಮೃತಪಟ್ಟಿರುವ ಘಟನೆ ಚಿಟ್ಟಾರಿಕ್ಕಲ್‌ನಲ್ಲಿ ನಡೆದಿದೆ.
ಚಿಟ್ಟಾರಿಕ್ಕಲ್ ಕಂಬಲ್ಲೂರು ತಾಮರಸ್ಶೆರಿಯ ಸುಧೀಶ್ ಅವರ ಪುತ್ರ ಸೌರಂಗ್ (9) ಮೃತಪಟ್ಟ ಬಾಲಕ. ಮನೆಯ ಸಮೀಪದ ರಬ್ಬರ್ ತೋಟದಲ್ಲಿ ಸೀರೆ ಬಳಸಿ ಉಯ್ಯಾಲೆ ಕಟ್ಟಲಾಗಿತ್ತು. ಬಾಲಕ ಉಯ್ಯಾಲೆಯಲ್ಲಿ ಆಟ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಬಿಗಿದಿದೆ.
ಗಂಭೀರವಾಗಿದ್ದ ಬಾಲಕನಿಗೆ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಈ ವೇಳೆ ಬಾಲಕ ಮೃತಪಟ್ಟಿದ್ದಾನೆ. ಮೃತದೇಹದ ಮರಣೋತ್ತರ ಪರೀಕ್ಷೆ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಗಿದೆ.
- Advertisement -