Thursday, August 6, 2026
spot_imgspot_img
spot_imgspot_img

ಕಾಸರಗೋಡು: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!

- Advertisement -
- Advertisement -

ಕಾಸರಗೋಡು: ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ವರ್ಕಾಡಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ವರ್ಕಾಡಿ ಸಮೀಪದ ನಾವಡ್ರಬೈಲ್ ನಕ್ಸೇವಿಯರ್ ಡಿ ಸೋಜ (65) ಎಂದು ಗುರುತಿಸಲಾಗಿದೆ.

ಮನೆಯಯಿಂದ 200 ಮೀಟರ್ ದೂರದ ಸಂಬಂಧಿಕರೋರ್ವರ ತೋಟದ ಕೆರೆಯಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಮಂಗಳವಾರ ರಾತ್ರಿ ಮನೆಯಿಂದ ಹೊರ ತೆರಳಿದವರು ನಾಪತ್ತೆಯಾಗಿದ್ದರು. ತಡರಾತ್ರಿ ತನಕ ಮನೆಗೆ ಹಿಂತಿರುಗದೆ ಹಿನ್ನಲೆಯಲ್ಲಿ ಮನೆಯವರು ಹಾಗೂ ಪರಿಸರ ವಾಸಿಗಳು ಶೋಧ ನಡೆಸಿದ್ದರು.ನಾಪತ್ತೆ ಬಗ್ಗೆ ಮನೆಯವರು ಮಂಜೇಶ್ವರ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು. ಪೊಲೀಸರು ಮತ್ತು ನಾಗರಿಕರು ಹುಡುಕಾಟ ನಡೆಸುತ್ತಿದ್ದಂತೆ ಗುರುವಾರ ಮಧ್ಯಾಹ್ನ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

- Advertisement -

Related news

error: Content is protected !!