Saturday, June 13, 2026
spot_imgspot_img
spot_imgspot_img

ಕಾಸರಗೋಡು: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ..!

- Advertisement -
- Advertisement -

ಕಾಸರಗೋಡು: ಉಪ್ಪಳದಿಂದ ನಾಪತ್ತೆಯಾಗಿದ್ದ ಗುತ್ತಿಗೆ ದಾರನ ಮೃತದೇಹ ಕುಂಬಳೆ ಶಿರಿಯ ನದಿಯಲ್ಲಿ ಪತ್ತೆಯಾಗಿದೆ.

ಮೃತಪಟ್ಟ ವ್ಯಕ್ತಿ ಮಣ್ಣಂಗುಳಿಯ ಶರೀಫ್ (32) ಎಂದು ಗುರುತಿಸಲಾಗಿದೆ.

ಶಿರಿಯ ನದಿಯ ಕರಾವಳಿ ಪೊಲೀಸ್ ಠಾಣೆಯ ಸಮೀಪದ ನದಿ ತೀರದ ಕಾಂಡ್ಲಾ ಕಾಡಿನಲ್ಲಿ ಪತ್ತೆಯಾಗಿದೆ. ಮಂಗಳವಾರ ಸಂಜೆ ಸ್ಕೂಟರ್‌ನಲ್ಲಿ ಮನೆಯಿಂದ ಹೊರಟಿದ್ದ ಶರೀಫ್ ಬಳಿಕ ನಾಪತ್ತೆಯಾಗಿದ್ದರು.

ಬುಧವಾರ ಶಿರಿಯ ಸೇತುವೆ ಬಳಿ ಶರೀಫ್‌‌ರ ಸ್ಕೂಟರ್ ಪತ್ತೆಯಾಗಿತ್ತು. ಮನೆಯವರು ಶರೀಫ್‌‌ರ ಮೊಬೈಲ್‌ಗೆ ಕರೆ ಮಾಡಿದರೂ ಸ್ವಿಚ್ಛ್ ಆಫ್ ಆಗಿತ್ತು . ಇದರಿಂದ ತಂದೆ ಇಬ್ರಾಹಿಂ ಮಂಜೇಶ್ವರ ಪೊಲೀಸ್ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರಿಂದ ಶರೀಫ್‌ಗಾಗಿ ಶೋಧ ನಡೆಸ ಲಾಗುತ್ತಿತ್ತು. ಈ ನಡುವೆ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಕೃತ್ಯದ ಬಗ್ಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

- Advertisement -

Related news

error: Content is protected !!