- Advertisement -
- Advertisement -
ಕಾಸರಗೋಡು:ಕಾಸರಗೋಡು ಜಿಲ್ಲೆಗೆ ಅಡ್ಡ ಹಾದಿಗಳ ಮೂಲಕ ಅಕ್ರಮವಾಗಿ ಜನರನ್ನು ಕರೆತರುವ ಕೆಲವರ ವ್ಯವಸ್ಥಿತ ಸಂಚಿನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ.

ಈ ರೀತಿ ಅಕ್ರಮವಾಗಿ ಜನರನ್ನು ಕರೆತರುವ ಕೆಲವು ಏಜೆಂಟರಿದ್ದು, ಅವರಿಗೆ ಹಣ ನೀಡಿ ಕೆಲವರು ಈ ಕೆಲಸ ನಡೆಸುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯ ಗಡಿಪ್ರದೇಶಗಳಲ್ಲಿ, ಅಡ್ಡದಾರಿಗಳಲ್ಲಿ ಬಿಗಿ ಪಹರೆ ಏರ್ಪಡಿಸಲಾಗಿದೆ.ಈ ಪ್ರಕರಣ ಕ್ಕೆ ಸಂಬಂಧಿಸಿದ ಆರೋಪದಲ್ಲಿ ಉಪ್ಪಳದ ಸಾಜನ್ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

- Advertisement -