Monday, May 13, 2024
spot_imgspot_img
spot_imgspot_img

ಕಾಸರಗೋಡು; ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಶಿಕ್ಷಕನಿಗೆ 10 ವರ್ಷ ಜೈಲು ಶಿಕ್ಷೆ

- Advertisement -G L Acharya panikkar
- Advertisement -

ಕಾಸರಗೋಡು: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ಜುಲ್ಮಾನೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯ (ಫೋಕ್ಸೋ) ದ ನ್ಯಾಯಾಧೀಶರಾದ ಸಿ. ಸುರೇಶ್ ಕುಮಾರ್ ಅವರು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

ಚೆಮ್ರಾಡ್ ದೇಳಿ ನಿವಾಸಿ ಹಾಗೂ ಮದ್ರಸಾ ಅಧ್ಯಾಪಕನಾಗಿರುವ ಎಂ.ಎ. ಉಸ್ಮಾನ್ (43) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಗೆ ತದಿದ್ದಲ್ಲಿ ಅಪರಾಧಿಗೆ 4 ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

2022 ಮಾರ್ಚ್ ತಿಂಗಳಲ್ಲಿ ಮದ್ರಾಸಕ್ಕೆ ಕಲಿಯಲು ಬಂದ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಆರೋಪಿ ಉಸ್ಮಾನ್ ವಿರುದ್ಧ ಫೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು.

- Advertisement -

Related news

error: Content is protected !!