Thursday, October 10, 2024
spot_imgspot_img
spot_imgspot_img

ಕಾಸರಗೋಡು: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮಳಿಗೆಗಳು; ಲಕ್ಷಾಂತರ ರೂ. ನಷ್ಟ..!

- Advertisement -
- Advertisement -

ಕಾಸರಗೋಡು: ಶಾರ್ಟ್ ಸರ್ಕ್ಯೂಟ್ ನಿಂದ ಎರಡು ಮಳಿಗೆಗಳು ಬೆಂಕಿಗೆ ಧಗಧಗನೆ ಹೊತ್ತಿ ಉರಿದ ಘಟನೆ ಕಾಸರಗೋಡಿನ ಹಳೆ ಬಸ್ಸು ನಿಲ್ದಾಣ ಸಮೀಪ ನಡೆದಿದೆ.

ಹಳೆ ಬಸ್ಸು ನಿಲ್ದಾಣ ಸಮೀಪದ ಸರಕು ಸಾಮಾಗ್ರಿ, ಮೊಬೈಲ್ ಹಾಗೂ ವಾಚ್ ವರ್ಕ್ಸ್ ಮಳಿಗೆಗಳಲ್ಲಿ ಈ ಬೆಂಕಿ ಅವಘಡ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅಪಘಾತ ನಡೆದಿದೆ ಎನ್ನಲಾಗುತ್ತಿದೆ. ಮೊಬೈಲ್ ಮಳಿಗೆಯಲ್ಲಿ ಮೂರು ಲಕ್ಷ ರೂ. ಹಾಗೂ ಸರಕು ಸಾಮಾಗ್ರಿ ಮಳಿಗೆಯಲ್ಲಿ ಸುಮಾರು 12 ಲಕ್ಷ ರೂ. ನಷ್ಟವುಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

- Advertisement -

Related news

error: Content is protected !!