Monday, April 29, 2024
spot_imgspot_img
spot_imgspot_img

ಕಾಸರಗೋಡು: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

- Advertisement -G L Acharya panikkar
- Advertisement -

ಕಾಸರಗೋಡು: ನೀರಿನ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನೀಲೇಶ್ವರ ಬಂಗಳದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಬಂಗಳ ಕರಿಕುಂಡುವಿನ ಅಲ್ಬಿನ್ ಸೆಬಾಸ್ಟಿಯನ್ (16) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಸಹಪಾಠಿಗಳ ಜೊತೆ ಮನೆ ಸಮೀಪದ ಗಣಿಗಾರಿಕೆ ನಡೆಸಿದ್ದ ಸ್ಥಳದಲ್ಲಿ ಹೊಂಡದಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದೆ.

ನೀರಿನಲ್ಲಿ ಮುಳುಗಿದ್ದ ವಿದ್ಯಾರ್ಥಿಗಾಗಿ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗಿನಿಂದ ಕಣ್ಣೂರಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಮುಳುಗು ತಜ್ಞರು ಶೋಧ ನಡೆಸಿ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದು ಬಂದಿದೆ.

Insta: glacharyajewellers
Fb: glacharya

- Advertisement -

Related news

error: Content is protected !!