Sunday, June 29, 2025
spot_imgspot_img
spot_imgspot_img

ಕಾಸರಗೋಡು: ನಿಯಂತ್ರಣ ತಪ್ಪಿ ಮಗುಚಿ ಬಿದ್ದ ದ್ವಿಚಕ್ರ ವಾಹನ – ಲಾರಿ ಹರಿದು ಮಹಿಳೆ ಸಾವು

- Advertisement -
- Advertisement -

ಕಾಸರಗೋಡು : ಸ್ಕೂಟರ್ ಮಗುಚಿ ರಸ್ತೆಗೆಸೆಯಲ್ಪಟ್ಟು ಸಹಸವಾರೆ ಮೇಲೆ ಲಾರಿ ಹರಿ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ತೆಕ್ಕಿಲ್ ನಲ್ಲಿ ನಡೆದಿದೆ.

ಪೈಕ ಚಂದ್ರಪಾರೆಯ ಮಣಿ ಎಂಬವರ ಪತ್ನಿ ಶಶಿಕಲಾ (31) ಮೃತ ದುರ್ದೈವಿ.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಚಟ್ಟಂಚಾಲ್ – ಚೆರ್ಕಳ ರಸ್ತೆಯ ತೆಕ್ಕಿಲ್ ಬಳಿ ಅಪಘಾತ ನಡೆದಿದೆ. ಶಶಿಕಲಾ, ಪತಿ ಮಣಿ ಹಾಗೂ ಇಬ್ಬರು ಮಕ್ಕಳ ಜೊತೆ ಸ್ಕೂಟರ್ ನಲ್ಲಿ ಚೆರ್ಕಳ ದಿಂದ ಚಟ್ಟಂ ಚಾಲ್ ಕಡೆಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಸ್ಕೂಟರ್ ಮಗುಚಿ ಬಿದ್ದಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಶಶಿಕಲಾರ ಮೇಲೆ ಕಂಟೈನರ್ ಲಾರಿ ಹರಿದು ಈ ಅವಘಡ ನಡೆದಿದೆ. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.ಅಪಘಾತದಲ್ಲಿ ಪತಿ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!