- Advertisement -
- Advertisement -
ಕಾಸರಗೋಡು: ಯುವಕನೋರ್ವನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆಗೈದು ನಗದು ದೋಚಿ ಪರಾರಿಯಾದ ಆರೋಪಿಗಳನ್ನು ಬಂಧಿಸಿದ ಘಟನೆ ಪಿಲಿಕ್ಕೋಡೆ ಮಡಿವಯಲಿ ಎಂಬಲ್ಲಿ ನಡೆದಿದೆ.
ಅಪಹರಣಕ್ಕೊಳಗಾದ ಯುವಕ ವೆಂಬಿರಿನ್ ನಿಧಿನ್(30) ಹಾಗೂ ಬಂಧಿತ ವ್ಯಕ್ತಿಗಳನ್ನು ಚೆರುವತ್ತೂರು ಮಲ್ಲಾಕುದಿರಿನ ಎಂ.ಝಕರ್(27), ಮುಹಮ್ಮದ್ ಶರೀಫ್ (30), ಚರುವತ್ತೂರು ಪಿಲಾವಳಪ್ಪಿನ ಮುಹಮ್ಮದ್ ಅನಸ್(20) ಮತ್ತು ಚೆರುವತ್ತೂರು ರಾಜೇಂದ್ರ ಕ್ವಾರ್ಟಸ್‌ನ ಮುಹಮ್ಮದ್ ಸಿದ್ದೀಕ್(23) ಎಂದು ಗುರುತಿಸಲಾಗಿದೆ.
ಚರುವತ್ತೂರು ರೈಲು ನಿಲ್ದಾಣ ಪರಿಸರದಿಂದ ಆಟೋ ರಿಕ್ಷಾದಲ್ಲಿ ಅಪಹರಿಸಿ ಮಾರಕಾಯುಧಗಳಿಂದ ಹಲ್ಲೆ ಮಾಡಿ, ಅವರ
ಕೈಯಲ್ಲಿದ್ದ 1800 ರೂ. ನಗದು ಮತ್ತು ಮೊಬೈಲ್ ಫೋನ್ ಎಗರಿಸಿದ ಬಳಿಕ ಅವರನ್ನು ರಸ್ತೆ ಬದಿಯಲ್ಲಿ ತಳ್ಳಿ ಪರಾರಿಯಾದ ನಾಲ್ವರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.
- Advertisement -