Sunday, June 29, 2025
spot_imgspot_img
spot_imgspot_img

ಅರ್ಧ ಕಿಲೋ ಚಿನ್ನ ಲೇಪಿತ ಪ್ಯಾಂಟ್ ಧರಿಸಿ ಬಂದ ಭೂಪ; ಆರೋಪಿ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ!

- Advertisement -
- Advertisement -

ಕಾಸರಗೋಡು: ಗಲ್ಫ್ ಪ್ರದೇಶದಿಂದ ಅಕ್ರಮವಾಗಿ ತನ್ನ ಪ್ಯಾಂಟ್ ಒಳಗೆ ದ್ರವರೂಪದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಹೋಗಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಉಪ್ಪಳದ ನಿವಾಸಿ ಶಾಫಿ(31) ತನ್ನ ಪ್ಯಾಂಟ್ ಒಳಗೆ ದ್ರವರೂಪದ ಚಿನ್ನವನ್ನು ಲೇಪಿಸಿ ಅಧಿಕಾರಿಗಳು ಸುಲಭವಾಗಿ ಗುರುತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಲೇಪಿತ ಚಿನ್ನದ ಬಟ್ಟೆ ಮೇಲೆ ಮತ್ತೊಂದು ಲೈನಿಂಗ್ ಬಟ್ಟೆಯನ್ನು ಹೊಲಿದು ಸೇರಿಸಲಾಗಿದೆ. ಕರಿಪುರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯವರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆತ ಚಿನ್ನ ಲೇಪಿತ ಪ್ಯಾಂಟ್ ಧರಿಸಿದ್ದು, ಸುಮಾರು 20 ಲಕ್ಷ ಮೌಲ್ಯದ ಅರ್ಧ ಕಿಲೋ ಚಿನ್ನವನ್ನು ಲೇಪಿಸಿರುವುದಾಗಿ ಅಂದಾಜಿಸಲಾಗಿದೆ. ಇಂತಹ ಪ್ರಕರಣ ಕರಿಪುರ ವಿಮಾನ ನಿಲ್ದಾಣದ ಮೊದಲ ಬಾರಿಗೆ ವರದಿಯಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!