ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷವನ್ನು ಧರಿಸಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ರವಿ ಕಟಪಾಡಿ ಮತ್ತು ತಂಡ ಈ ಬಾರಿ ಕೊರೊನಾ ಜನಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಬಾರಿ ಹಾಲಿವುಡ್ ಡೆವಿಲ್ ಆಗಿ ಮಿಂಚುತ್ತಿದ್ದಾರೆ.


ಕೃಷ್ಣ ಜನ್ಮಾಷ್ಟಮಿಗೆ ರವಿ ಕಟಪಾಡಿ ಈ ಬಾರಿ ಕೊರೊನಾ ವೇಷದ ಮೂಲಕ ಜನಜಾಗ್ರತಿಗೆ "ಹಾಲಿವುಡ್ ಡೆವಿಲ್"ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷವನ್ನು ಧರಿಸಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ರವಿ ಕಟಪಾಡಿ ಮತ್ತು ತಂಡ ಈ ಬಾರಿ ಕೊರೊನಾ ಜನಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಬಾರಿ ಹಾಲಿವುಡ್ ಡೆವಿಲ್ ಆಗಿ ಮಿಂಚುತ್ತಿದ್ದಾರೆ.
Posted by VTV on Thursday, 10 September 2020

ಈ ಬಾರಿ ಹಾಲಿವುಡ್ ಡೆವಿಲ್ ಆಗಿ ಕೊರೋನಾ ರೋಗದ ಅರಿವು ಮೂಡಿಸಲು ವಿಶೇಷ ವೇಷದ ಮೂಲಕ ಸವರು ಸುದ್ಧಿಯಾಗ್ತಿದ್ದಾರೆ. ಎರಡು ದಿನಗಳ ಕಾಲ ರವಿ ಜಿಲ್ಲೆಯ ಹಳ್ಳಿ ಹಳ್ಳಿಗೆ ತೆರಳಿ ಕೊರೊನಾ ವೇಷದ ಮೂಲಕ ಜನಜಾಗ್ರತಿ ಮೂಡಿಸಲಿದ್ದಾರೆ.ಕಳೆದ ಎಂಟು ವರ್ಷಗಳಿಂದ ವೇಷಧಾರಿಯಾಗಿ ಸಂಗ್ರಹಿಸಲ್ಪಟ್ಟ ಹಣದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡ್ತಾ ಬಂದಿದ್ದಾರೆ. ಈ ಬಾರಿ ರವಿ ಕೊರೋನಾ ದಿಂದಾಗಿ ಫಂಡ್ ಕಲೆಕ್ಟ್ ಮಾಡ್ತಾ ಇಲ್ಲ. ಕಷ್ಟದಲ್ಲಿರೋ ಜನರು, ಭೀಕರ ಕಾಯಿಲೆಯಿಂದ ಬಳಲುತ್ತಿರೋ 58 ಮಂದಿಗೆ ಸುಮಾರು 50 ಲಕ್ಷಕ್ಕೂ ಹೆಚ್ಚು ಸಹಾಯವನ್ನು ರವಿ ಈಗಾಗಲೇ ಮಾಡಿದ್ದಾರೆ.

ಕಟ್ಟಡ ಕಾರ್ಮಿಕನಾಗಿ ದುಡಿಯೋ ರವಿ ಕಟಪಾಡಿ ಅಷ್ಟಮಿ ಬಂದ್ ಕೂಡಲೇ ಅವರ ಟೀಮ್ ನೊಂದಿಗೆ ರಿಸ್ಕ್ ತೆಗೆದುಕೊಂಡು ವಿಶೇ ವೇಷದೊಂದಿಗೆ ಗಮನಸೆಳಿತಾರೆ. ಸಾಮಾಜಿಕ ಕಾಳಜಿ ಜೊತೆಗೆ ಅವರ ಅಪರೂಪದ ವೇಷ ಜನ ಮನ ಗೆದ್ದಿರಿದಂತೂ ಸತ್ಯವಿಷಯ.

