- Advertisement -
- Advertisement -





ಕಾಪು: ಉದ್ಯಾವರ ರಾ.ಹೆ 66ರ ಸೇತುವೆಗೆ ಬೈಕೊಂದು ಢಿಕ್ಕಿ ಹೊಡೆದು ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ (ಜ.2)ಶುಕ್ರವಾರ ನಸುಕಿನ ವೇಳೆ ಸುಮಾರು 2.30ಕ್ಕೆ ಸಂಭವಿಸಿದೆ. ಮೃತರನ್ನು ಸುಬ್ರಹ್ಮಣ್ಯದ ಯುವರಾಜ್ ಎಂದು ಗುರುತಿಸಲಾಗಿದೆ.
ಮಂಗಳೂರಿಂದ ಉಡುಪಿ ಕಡೆ ತೆರಳುತ್ತಿದ್ದ ಬೈಕ್ ಅತಿವೇಗದಿಂದ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಸವಾರ ಯುವರಾಜ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಉಚ್ಚಿಲದ ಎಸ್‌ಡಿಪಿಐ ಆಂಬುಲೆನ್ಸ್ ನಲ್ಲಿ ಕೆಎಂ ಸಿರಾಜ್, ಜಲಾಲುದ್ದೀನ್ ಅಜ್ಜರಕಾಡು ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.
- Advertisement -








