Thursday, June 18, 2026
spot_imgspot_img
spot_imgspot_img

ಕಾಪು : ಖಾಸಗಿ ಬಸ್ ಢಿಕ್ಕಿ ; ವಿದ್ಯಾರ್ಥಿನಿ ಮೃತ್ಯು

- Advertisement -
- Advertisement -

ಕಾಪು : ಖಾಸಗಿ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಕಾಪು ಮಹಾದೇವಿ ಪ್ರೌಢಶಾಲೆಯ ಎಂಟನೇ ತರಗತಿ ವರ್ಷಿತಾ ಶೇರ್ವೆಗಾರ (13) ಮೃತ ವಿದ್ಯಾರ್ಥಿನಿ.

ಶಾಲೆಗೆ ಬರುತ್ತಿದ್ದ ಆಕೆ ರಾಷ್ಟ್ರೀಯ ಹೆದ್ದಾರಿ 66ರ ಮಂದಾರ ಹೊಟೇಲ್ ಬಳಿ ರಸ್ತೆ ದಾಟಲು ನಿಂತಿದ್ದ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಬಾಲಕಿಯ ತಲೆಗೆ ಗಂಭೀರ ಏಟಾಗಿದ್ದು ಗಂಭೀರ ಗಾಯಗೊಂಡಿರುವ ಆಕೆಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಖಾಸಗಿ ಬಸ್ ಅನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!