Friday, June 26, 2026
spot_imgspot_img
spot_imgspot_img

ಕಾಪು: ತಾಯಿಯ ಬುದ್ದಿಮಾತಿಗೆ ನೊಂದು ಬಾಲಕಿ ಆತ್ಮಹತ್ಯೆ!

- Advertisement -
- Advertisement -

ಕಾಪು: ಮಣೀಪುರ ಗ್ರಾಮ ಕೋಟೆ ಬಳಿ ಮೊಬೈಲ್ ಗೇಮ್ ಅತಿಯಾಗಿ ಆಡದಂತೆ ತಾಯಿಯ ಬುದ್ದಿಮಾತಿಗೆ ನೊಂದು 16ರ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ನಡೆದಿದೆ. ಮೃತ ಬಾಲಕಿಯನ್ನು ಶಾಬನ್ ಹಾಗೂ ಜುಬೇದಾ ಅವರ ಪುತ್ರಿ ಸುಹೇಬತ್ ಅಸ್ಲಮೀಯಾ(16) ಎಂದು ಗುರುತಿಸಲಾಗಿದೆ.

ರಾತ್ರಿ 8.00 ಗಂಟೆ ವೇಳೆಗೆ ತಾಯಿಯು ಮೊಬೈಲ್ ನಲ್ಲಿ ಆಟ ಆಡದಂತೆ ಸುಹೇಬತ್ ಅಸ್ಲಮೀಯಾ ಬುದ್ದಿ ಹೇಳಿ ಮೊಬೈಲ್‌ನ್ನು ತೆಗೆದುಕೊಂಡು, ಬಳಿಕ ನಮಾಜ್ ಮಾಡಲು ಹೋಗಿದ್ದಾರೆ. ಇನ್ನು ಬಾಲಕಿಯ ತಂದೆ ಈ ವೇಳೆ ಸ್ನಾನ ಮಾಡುತ್ತಿದ್ದು, ಬಳಿಕ ನಮಾಜ್ ಮುಗಿಸಿ ಹೊರಬಂದು ನೋಡುವಾಗ ಮಗಳು ಮನೆಯಲಿಲ್ಲದಿರುವುದನ್ನು ಗಮನಿಸಿದ್ದಾರೆ. ಆ ಬಳಿಕ ಇಬ್ಬರೂ ಸೇರಿ ಹುಡುಕಲಾರಂಭಿಸಿದಾಗ ಮನೆಯಿಂದ 200 ಮೀ. ದೂರದಲ್ಲಿರುವ ಸರ್ಕಾರಿ ಬಾವಿ ಹತ್ತಿರ ಜನ ಸೇರಿದ್ದನ್ನು ಗಮನಿಸಿ ಹೋಗಿದ್ದಾರೆ.

ಈ ವೇಳೆ ಮಗಳು ಬಾವಿಯ ನೀರಿನಲ್ಲಿ ಮುಳುಗುತ್ತಿರುವುದನ್ನು ತಿಳಿದು ಗಾಬರಿಯಾಗಿದ್ದಾರೆ. ಬಳಿಕ ಅಗ್ನಿ ಶಾಮಕದಳ ಬಂದು ಬಾಲಕಿಯನ್ನು ಮೇಲಕ್ಕೆತ್ತಿದ್ದರೂ ಅದಾಗಲೇ ಆಕೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದ್ದು, ಈ ಬಗ್ಗೆ ಬಾಲಕಿಯ ತಾಯಿ ಜುಬೇದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!