


ಕೆಲಿಂಜ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೆಲಿಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವುದು ಮತ್ತು ಸೀಡ್ ಬಾಲ್ ವಿತರಣಾ ಕಾರ್ಯಕ್ರಮವನ್ನು ಭರತ್ ಕಾರ್ಪೊರೇಷನ್ ಮತ್ತು ಅವೆನ್ವಿ ಸೊಲ್ಯೂಷನ್ಸ್ ಮಂಗಳೂರು ಇವರು ಹಮ್ಮಿಕೊಂಡಿದ್ದರು.

ದೇವದಾಸ ರೈ ಮಾಡದಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಲಿಂಜ ಶಾಲಾ ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಭರತ್ ರಾಜ್ ನಿರ್ದೇಶಕರು ಭರತ್ ಕಾರ್ಪೊರೇಷನ್ ಮಂಗಳೂರು, ಶ್ರೀಮತಿ ಸಿಂಚನ ನಿರ್ದೇಶಕರು ಅವೇನ್ವಿ ಸೊಲ್ಯೂಷನ್ಸ್ ಮಂಗಳೂರು, ಶ್ರೀಮತಿ ಲಲಿತಾ ಅಧ್ಯಕ್ಷರು ಗ್ರಾಮ ಪಂಚಾಯತ್ ವೀರಕಂಬ, ಶ್ರೀಮತಿ ಪುಷ್ಪ ಬಲ್ಲಾಳ್ CRP, ಶ್ರೀಮತಿ ಜಯಂತಿ sdmc ಅಧ್ಯಕ್ಷರು, ಹಮೀದ್ ಜಿ ಎಸ್ ಗುಳಿಗದ್ದೆ, ಸಂತೋಷ್ ಶೆಟ್ಟಿ ಸೀನಾಜೆ, ನರೇಶ್ ಶೆಟ್ಟಿ ಕಲ್ಮಲೆ, ಮೋಹಿತ್ ಶೆಟ್ಟಿ ಕೆಲಿಂಜ, ಸಂದೀಪ್ ಪೂಜಾರಿ ಪಂಚಾಯತ್ ಸದಸ್ಯರು,ಜಯಪ್ರಸಾದ್ ಶೆಟ್ಟಿ ಕಲ್ಮಲೆ ಪಂಚಾಯತ್ ಸದಸ್ಯರು, ಅಭಿಲಾಷ್ ಶೆಟ್ಟಿ ಆವೆನ್ವಿ ಸೊಲ್ಯೂಷನ್ಸ್ ಉಪಸ್ಥಿತರಿದ್ದರು. ಮಕ್ಕಳು ಪ್ರಾರ್ಥಿಸಿದರು,ಶಿಕ್ಷಕಿ ಶ್ರೀಮತಿ ಉಷಾ ಸುವರ್ಣ ಸ್ವಾಗತಿಸಿದರು,ಶಿಕ್ಷಕಿ ಅಶ್ವಿತ ವಂದನಾರ್ಪಣೆ ಸಲ್ಲಿಸಿದರು, ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಲಘು ಉಪಹಾರದ ಬಳಿಕ ಗಿಡ ಮತ್ತು ಸೀಡ್ ಚೆಂಡುಗಳನ್ನು ವಿತರಿಸಲಾಯಿತು .