







ಕೆಲಿಂಜ: (ಸೆ. 07) ಶ್ರೀ ಗಣೇಶೋತ್ಸವ ಸಮಿತಿ, ಕೆಲಿಂಜ ಇದರ ಆಶ್ರಯದಲ್ಲಿ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ. 07ನೇ ಶನಿವಾರದಂದು ಶ್ರೀ ನಿಕೇತನ ಮಂದಿರ ಕೆಲಿಂಜದಲ್ಲಿ ನಡೆಯಲಿದೆ.

ಬೆಳಿಗ್ಗೆ 10:00ಕ್ಕೆ ಪ್ರಗತಿಪರ ಕೃಷಿಕರು ಈಶ್ವರ ಭಟ್ ನಗ್ರಿಮೂಲೆ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕೆಲಿಂಜ ಇದರ ಪ್ರಧಾನ ಅರ್ಚಕರು ಮಹೇಶ್ ಭಟ್‌ರವರ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ 12:00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ಇದರ ಅಧ್ಯಕ್ಷ ಸಂದೀಪ್ ಪೂಜಾರಿ ಪೆಲತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕಿ ಮತ್ತು ಸಂಪನ್ಮೂಲ ವ್ಯಕ್ತಿ ರೇಣುಕಾ ಕಣಿಯೂರು, ಪ್ರೀತೇಶ್ ಅಂಚನ್ ಉದ್ಯಮಿಗಳು ತೊಕ್ಕೊಟ್ಟು ,ಕಾರ್ತಿಕ್ ಭಂಡಾರಿ ಬೆಂಗಳೂರು, ಲೋಹಿತ್ ಶೆಟ್ಟಿ ಕುಂಜತ್ತೂರು-ಮಂಜೇಶ್ವರ ಉದ್ಯಮಿಗಳು ಮಂಗಳೂರು, ಅಧ್ಯಕ್ಷರು ಹಿಂದೂ ಧಾರ್ಮಿಲ ಸೇವಾ ಸಮಿತಿ ಕೆಲಿಂಜ ರಾಜೇಂದ್ರ ಟೈಲರ್ ನಗ್ರಿಮೂಲೆ, ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ಮಾಜಿ ಅಧ್ಯಕ್ಷರು ದೇವದಾಸ ರೈ ಮಾಡದಾರ್ ಮಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ SSLC ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಬೆಳಿಗ್ಗೆ ಗಂಟೆ 10-30 ರಿಂದ 11-30ರವರೆಗೆ ಕೆಲಿಂಜೇಶ್ವರ ಭಜನಾ ಮಂಡಳಿ, ಕೆಲಿಂಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 1-00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಬಳಿಕ ಮಧ್ಯಾಹ್ನ 3-00ಕ್ಕೆ ಮಹಾಮಂಗಳಾರತಿ ನಡೆದು ವಿಜೃಂಭನೆಯ ಶೋಭಯಾತ್ರೆ ನಡೆಯಲಿದೆ. ಶ್ರೀ ನಿಕೇತನ ಮಂದಿರದಿಂದ ಕೆಲಿಂಜೇಶ್ವರ ಕುಣಿತ ಭಜನಾ ಮಂಡಳಿ, ಕೆಲಿಂಜ ಹಾಗೂ ಶ್ರೀ ವೀರಾಂಜನೇಯ ಕುಣಿತ ಭಜನಾ ಮಂಡಳಿ, ಕೋಡಪದವು ಇವರಿಂದ ಕುಣಿತ ಭಜನೆಯ ಮೂಲಕ ಹೊರಟು ಒಕ್ಕೆತ್ತೂರು ಹೊಳೆಯಲ್ಲಿ ಜಲಸ್ತಂಭನ ನಡೆಯಲಿದೆ.