- Advertisement -
- Advertisement -



ವಿಟ್ಲ: ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಕಜಂಬು ಜಾತ್ರೆಯು ದಿನಾಂಕ 16.12.2023 ಶನಿವಾರದಿಂದ ದಿನಾಂಕ 20.12.2023 ಬುಧವಾರ ತನಕ ನಡೆಯಲಿರುವುದು.
ದಿನಾಂಕ 16.12.2023ನೇ ಶನಿವಾರ ಧ್ವಜಾರೋಹಣಗೊಂಡು ದಿನಾಂಕ 17.12.2023ನೇ ಆದಿತ್ಯವಾರ ಕಜಂಬು ಉತ್ಸವ ಜರಗಲಿರುವುದು.
ದಿನಾಂಕ 16.12.2023ನೇ ಶನಿವಾರ ಬೆಳಿಗ್ಗೆ 10:00ಕ್ಕೆ ಸರಿಯಾಗಿ, ಕಲ್ಲಂಗಳ ಮಹಾದ್ವಾರದಿಂದ ಹಸಿರುವಾಣಿ ಮೆರವಣಿಗೆ ಹೊರಡುವುದು.
ದಿನಾಂಕ 24.12.2023 ಆದಿತ್ಯವಾರ ಭಂಡಾರದ ಕೊಟ್ಯದಲ್ಲಿ ಮಲರಾಯಿ ದೈವ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವ ಜರಗಲಿರುವುದು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


- Advertisement -