Friday, March 29, 2024
spot_imgspot_img
spot_imgspot_img

ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನಕ್ಕೆ ಕಳ್ಳರಿಂದ ಕನ್ನ

- Advertisement -G L Acharya panikkar
- Advertisement -

ವಿಟ್ಲ: ನಿನ್ನೆ ತಡರಾತ್ರಿ ಇತಿಹಾಸ ಪ್ರಸಿದ್ಧ ಕೇಪು ಶ್ರೀ ದುರ್ಗಾಪರಮೇಶ್ವರಿ (ಶ್ರೀ ಉಳ್ಳಾಲ್ತಿ ) ದೇವಸ್ಥಾನಕ್ಕೆ ಕಳ್ಳರು ನುಗ್ಗಿ ದೇವಸ್ಥಾನದ ಗರ್ಭ ಗುಡಿಯ ಬೀಗ ಒಡೆದು ಒಳಗಿನಿಂದ ದೇವರ ಬೆಲೆಬಾಳುವ ಬೆಳ್ಳಿಯ ಸಾಮಾಗ್ರಿಗಳು ಮತ್ತು ಕಾಣಿಕೆ ಹುಂಡಿಯ ನಗದನ್ನು ದೋಚಿದ್ದಾರೆ.

ಅಪಾರ ಭಕ್ತರನ್ನು ಹೊಂದಿರುವ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನಕ್ಕೆ ಎಂದಿನಂತೆ ಇಂದು ಬೆಳಿಗ್ಗೆ ದೇವರ ದರ್ಶನಕ್ಕೆ ಭಕ್ತರು ಬಂದಾಗ ದೇವಸ್ಥಾನ ಬೀಗ ಹೊಡೆದು ಬಾಗಿಲು ತೆರೆದಿತ್ತು. ತಕ್ಷಣವೇ ಭಕ್ತರು ಅರ್ಚಕರಿಗೆ ಮತ್ತು ಆಡಳಿತ ಮಂಡಳಿಗೆ ಮಾಹಿತಿ ತಿಳಿಸಿದ್ದಾರೆ.ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.


ಕಾರಣಿಕ ಕ್ಷೇತ್ರವಾದ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನವು ವಿಟ್ಲ ಅರಮನೆಯ ಆಡಳಿತಕ್ಕೆ ಒಳಪಟ್ಟಿದ್ದು ಬಹುಪುರಾತನ ಇತಿಹಾಸ ಪ್ರಸಿದ್ಧ ದೇವಾಲಯವಾಗಿದೆ.ಇಲ್ಲಿಯ ದೇವಿಗೆ ವರ್ಷಕ್ಕೊಂದು ಬಾರಿ ಮಕ್ಕಳ “ಕಜಂಬು ಉತ್ಸವ” ನಡೆಯುತ್ತದೆ.

- Advertisement -

Related news

error: Content is protected !!