- Advertisement -
- Advertisement -
ಕೇರಳ: ಕೋಯಿಕ್ಕೋಡ್ ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸುಮಾರು 18 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇಬ್ಬರು ಪೈಲಟ್ ಗಳು ಸೇರಿದಂತೆ 6 ಮಂದಿ ಸಿಬ್ಬಂದಿ ಕೂಡ ಬಲಿಯಾಗಿದ್ದಾರೆ. ಈ ಪೈಕಿ ಮೃತಪಟ್ಟ ಕ್ಯಾಪ್ಟನ್ ದೀಪಕ್ ಸಾಠೆ ಅವರು ಭಾರತೀಯ ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.
ವಿಂಗ್ ಕಮಾಂಡರ್ ದೀಪಕ್ ಸಾಠೆ ಅವರು ಬೋಯಿಂಗ್ 737 ವಿಮಾನ ಚಲಾಯಿಸುವುದರಲ್ಲಿ ತುಂಬಾ ಅನುಭವ ಹೊಂದಿದ್ದರು. ಭಾರತೀಯ ವಾಯುಪಡೆಯಲ್ಲಿ ಸುಮಾರು 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಏರ್ ಪೋರ್ಸ್ ನಲ್ಲಿ ಟೆಸ್ಟ್ ಪೈಲಟ್ ಆಗಿದ್ದ ದೀಪಕ್ ಸಾಠೆ ಅವರಿಗೆ 58 ಎನ್ ಡಿ ಎ ಪ್ರೆಸಿಡೆಂಟ್ ಗೋಲ್ಡ್ ಮೆಡಲ್ ನೀಡಿ ಗೌರವಿಸಿತ್ತು.
ದುರಂತದಲ್ಲಿ ಸಾವಿಗೀಡಾದ ಮತ್ತೊಬ್ಬ ಪೈಲಟ್ ಅಖಿಲೇಶ್ ಕುಮಾರ್ ಕಳೆದ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
- Advertisement -