


ಕಡಬ:ಕಡಬ ಸರಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪ್ರಖಂಡ ವಿ.ಹಿಂ.ಪ. ಮಾತೃಶಕ್ತಿ ದುರ್ಗಾವಾಹಿನಿ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು.
ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣವನ್ನು ವಿಶ್ವಹಿಂದೂ ಪರಿಷತ್, ದುರ್ಗಾವಾಹಿನಿ ಖಂಡಿಸಿದ್ದು, ಆರೋಪಿ ಅಬಿನ್ ಸಿಬಿ ಕೇರಳ ಮೂಲದವನಾಗಿದ್ದು, ಕೇರಳ ಸರಕಾರವೂ ವಿದ್ಯಾರ್ಥಿನಿಯರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೃತ್ಯ ನಡೆದ ಸ್ಥಳವಾದ ಕಡಬ ಪದವಿ ಪೂರ್ವ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಕಾಲೇಜಿಗೆ ಸರಿಯಾದ ಆವರಣ ಗೋಡೆ ಇಲ್ಲ, ಅಲ್ಲದೆ ಆವರಣ ಗೋಡೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು ಆದರೆ ಈವರೆಗೂ ಆವರಣಗೋಡೆ ಮಾಡಿಲ್ಲ, ಕಾಲೇಜಿನಲ್ಲಿ ಭದ್ರತೆಗೆ ಇಲ್ಲಿ ಯಾವುದೇ ಪ್ರಾಮುಖ್ಯತೆ ನೀಡದ ಕಾರಣ ಈ ಕೃತ್ಯ ನಡೆದಿದೆ.
ರಾಜ್ಯದಲ್ಲಿ ಮಹಿಳೆಯರಿಗೆ ಅಭದ್ರತೆ ಇದೆ.ಸರಕಾರ ಕೂಡಲೇ ಹೆಣ್ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಹಾಗೂ ಪೈಶಾಚಿಕ ಕೃತ್ಯ ಎಸಗುವವರಿಗೆ ನಮ್ಮಲ್ಲಿ ಸರಿಯಾಗಿ ಶಿಕ್ಷೆ ಆಗದಿರುವುದೇ ಈ ರೀತಿಯ ಪೈಶಾಚಿಕ ಕೃತ್ಯಗಳು ಮರುಕಳಿಸಲು ಕಾರಣವಾಗಿದೆ ಎಂದು ದುರ್ಗಾವಾಹಿನಿ ಆರೋಪಿಸಿದೆ