Saturday, August 15, 2026
spot_imgspot_img
spot_imgspot_img

ಕೆಯ್ಯೂರು: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಸವಾರ ಮೃತ್ಯು..!

- Advertisement -
- Advertisement -

ಕೆಯ್ಯೂರು: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್‌ ನಡುವೆ ‌ಇಂದು(ಆ.15) ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಕೆಯ್ಯೂರು ಗ್ರಾಮದ ಬೊಳಿಕ್ಕಳ ನೆಲ್ಲಿಗುರಿ ಬಳಿ ನಡೆದಿದೆ.

ಕುಮಾರಮಂಗಿಲ ಬಳಿಯ ಬಂಬಿಲ ನಿವಾಸಿ, ಅಭಿಲಾಷ್(24) ಮೃತರು.

ಮಾಡಾವು ಕಟ್ಟೆಯಿಂದ ಸವಣೂರು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಸವಣೂರಿನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮ ಅಭಿಲಾಷ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಸ್ಥಳದಲ್ಲಿ ಜನರು ಜಮಾಯಿಸಿದರು.

ಮೃತರು ತಂದೆ, ತಾಯಿ, ಅಣ್ಣನನ್ನು ಅಗಲಿದ್ದಾರೆ. ಘಟನೆ ಕುರಿತು ಪುತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!