Tuesday, September 28, 2021
spot_imgspot_img
spot_imgspot_img

ಕೆಜಿಎಫ್ ಚಾಪ್ಟರ್​ 2 ರಿಲೀಸ್ ಗೆ ಡೇಟ್ ಫಿಕ್ಸ್!

- Advertisement -
- Advertisement -

ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಈ ವಿಚಾರವನ್ನು ನಟ ಯಶ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್ಮ್ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಚಿತ್ರದ ಬಿಡುಗಡೆ ದಿನಾಂಕವನ್ನು ಟ್ವಿಟರ್​ ಮೂಲಕ ಬಹಿರಂಗಪಡಿಸಿದ್ದಾರೆ. ಜೊತೆಗೆ ಹೊಸ ಪೋಸ್ಟರ್​ ಹಂಚಿಕೊಂಡು ಅಭಿಮಾನಿಗಳಿಗೆ ಈ ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ.

ಕೊರೊನಾ ವೈರಸ್​ ಎರಡನೇ ಅಲೆ ಹರಡಿದ ಪರಿಣಾಮ ‘ಕೆಜಿಎಫ್​ 2’ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲಾಗಿತ್ತು. ಇದೀಗ 2022ರ ಏಪ್ರಿಲ್​ 14ಕ್ಕೆ ‘ಕೆಜಿಎಫ್​ 2’ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿದ್ದಾರೆ.

ಕೆಲವೇ ದಿನಗಳ ಹಿಂದೆ ‘ಕೆಜಿಎಫ್​: ಚಾಪ್ಟರ್​ 2’ ತಂಡದಿಂದ ಬಿಗ್​ ನ್ಯೂಸ್​ ಹೊರಬಿದ್ದಿತ್ತು. ಈ ಸಿನಿಮಾದ ಟಿವಿ ಪ್ರಸಾರ ಹಕ್ಕುಗಳನ್ನು ಜೀ ಕನ್ನಡ ವಾಹಿನಿ ಪಡೆದುಕೊಂಡಿದೆ ಎಂಬುದು ಖಚಿತವಾಯಿತು.

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ‘ಕೆಜಿಎಫ್​ 2’ ಚಿತ್ರವನ್ನು ಆಯಾ ಭಾಷೆಯ ಜೀ ವಾಹಿನಿ ಪ್ರಸಾರ ಮಾಡಲಿದೆ. ಅದಕ್ಕೂ ಮುನ್ನ ಚಿತ್ರಮಂದಿರದಲ್ಲೇ ಈ ಸಿನಿಮಾ ರಾರಾಜಿಸಲಿದೆ. ಥಿಯೇಟರ್​ನಲ್ಲಿ ಬಿಡುಗಡೆ ಆದ ಬಳಿಕವೇ ಈ ಚಿತ್ರ ಟಿವಿಯಲ್ಲಿ ಪ್ರಸಾರ ಆಗಲಿದೆ.

- Advertisement -
- Advertisement -

MOST POPULAR

HOT NEWS

Related news

error: Content is protected !!