Monday, May 6, 2024
spot_imgspot_img
spot_imgspot_img

ಉಪ್ಪಿನಂಗಡಿ: ಸಹಕಾರಿ ಸಂಘಕ್ಕೆ 916 ಹಾಲ್ ಮಾರ್ಕ್ ಇರುವ ನಕಲಿ ಆಭರಣ ನೀಡಿ ಹಣ ಪಡೆದು ವಂಚಿಸಿದ ಖದೀಮರು

- Advertisement -G L Acharya panikkar
- Advertisement -

ಉಪ್ಪಿನಂಗಡಿ : ನಕಲಿ ಬಳೆಗಳನ್ನು ಅಡವಿಟ್ಟು ಸಾಲ ಪಡೆದು ವಂಚಿಸಿರುವ ಘಟನೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ನಡೆದಿದೆ.

ಆರೋಪಿಗಳಾದ ನೆಲ್ಯಾಡಿ ಗ್ರಾಮದ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂಬವರು ಜ.27ರಂದು ಮಧ್ಯಾಹ್ನ ಮೇಲ್ನೋಟಕ್ಕೆ ನಕಲಿ ಎಂದು ಕಂಡುಬಾರದಂತಹ 916 ಹಾಲ್ ಮಾರ್ಕ್ ಇರುವ ಒಟ್ಟು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಅಡವಿಟ್ಟು, ಸಹಕಾರ ಸಂಘದಿಂದ ರೂ.1.40 ಲಕ್ಷ ಪಡೆದು ಮೋಸ ಮಾಡಿರುತ್ತಾರೆ ಎಂದು ಸಂಘದ ವ್ಯವಸ್ಥಾಪಕಿ ಚೈತನ್ಯ ಸಿ.ಹೆಚ್. ಎಂಬವರು ದೂರು ನೀಡಿದ್ದಾರೆ.

ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 16/2024 ಕಲಂ: 406,420, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಹಲವು ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ಈ ರೀತಿಯಾಗಿ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿದು ಬರಬೇಕಾಗಿದೆ.

- Advertisement -

Related news

error: Content is protected !!