- Advertisement -
- Advertisement -
ಕಿನ್ನಿಗೋಳಿ: ಕೂಲಿ ಕಾರ್ಮಿಕ ಬಸ್ಸಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಕಿನ್ನಿಗೋಳಿ-ಮುಂಡ್ಕೂರು ರಾಜ್ಯ ಹೆದ್ದಾರಿಯ ಏಳಿಂಜೆ ದ್ವಾರದ ಬಳಿ ನಡೆದಿದೆ. ಮೃತ ಕೂಲಿ ಕಾರ್ಮಿಕನನ್ನು ಸ್ಥಳೀಯ ನಿವಾಸಿ ಗಿರೀಶ್ (45) ಎಂದು ಗುರುತಿಸಲಾಗಿದೆ.
ಗಿರೀಶ್ ಅವರು ಮುಂಡ್ಕೂರು ದೇವಸ್ಥಾನದಲ್ಲಿ ಊಟ ಮಾಡಿ ಕಿನ್ನಿಗೋಳಿಗೆ ಹೋಗುವ ಬಸ್ಸಿನಲ್ಲಿ ಹತ್ತಿ ತನ್ನ ಮನೆಯಾದ ಏಳಿಂಜೆ ದ್ವಾರದ ಬಳಿ ಬಸ್ಸಿನಲ್ಲಿ ಇಳಿಯುತ್ತಿದ್ದಂತೆ ನಿರ್ವಾಹಕನ ಯಾವುದೇ ಸೂಚನೆ ಇಲ್ಲದೆ ಚಾಲಕ ಬಸ್ ಚಲಾಯಿಸಿದ್ದ ಎನ್ನಲಾಗಿದೆ. ಚಾಲಕನ ನಿರ್ಲಕ್ಷತೆಯ ಚಾಲನೆಯಿಂದ ಅಯತಪ್ಪಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಗಿರೀಶ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
- Advertisement -