Saturday, June 28, 2025
spot_imgspot_img
spot_imgspot_img

ಲಿವ್ ಇನ್ ರಿಲೇಶನ್ ಶಿಪ್..! ಪ್ರಿಯತಮೆಯ ಕಿಡ್ನಿ ಮಾರಿ 8 ಲಕ್ಷ ಹಣದೊಂದಿಗೆ ಪರಾರಿ!

- Advertisement -
- Advertisement -

ಕೊಚ್ಚಿ: ಇವನಿಗೆ ಹಣದ ದಾಹ.! ಹೀಗಾಗಿಯೇ 43 ವರ್ಷದ ಮಹಿಳೆಯ ಜೊತೆಗೆ ಆತ ಸಂಬಂಧ ಬೆಳೆಸಿದ್ದ. ಹಲವು ವರ್ಷಗಳಿಂದ ಸೋಫಿಯಾ ಜೊತೆ ಮೊಹಮ್ಮದ್ ರನಿಶ್ ಎಂಬಾತ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ. ಆಕೆಯ ಅಜ್ಞಾನವನ್ನೇ ಅಸ್ತ್ರವನ್ನಾಗಿಸಿದ ಈತ ಸೋಫಿಯಾಳ ಕಿಡ್ನಿ ಮಾರಲು ಮುಂದಾಗಿದ್ದಾನೆ..!

ಮದುವೆಯಾಗುವುದಾಗಿ ಮಹಿಳೆಯೊಬ್ಬಳ ಜತೆ ಸಂಬಂಧ ಬೆಳೆಸಿ ನಂತರ ಆಕೆಯ ಕಿಡ್ನಿಯನ್ನು ಮಾರಿ ಆತ ಎಂಟು ಲಕ್ಷ ರೂಪಾಯಿಗಳ ಜತೆ ಪರಾರಿಯಾಗಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ.

43 ವರ್ಷದ ಮಹಿಳೆ ಸೋಫಿಯಾ, ಜೊತೆ ಮೊಹಮ್ಮದ್ ರನೀಶ್ ಹಲವು ವರ್ಷದಿಂದ ಲಿವ್ ಇನ್ ರಿಲೇಷನ್‌ನಲ್ಲಿ ಇದ್ದರು. ಹಣದ ಸಮಸ್ಯೆ ಇದ್ದ ಕಾರಣ, ಅದನ್ನು ಕೊನೆಗಾಣಿಸಲು ಕಿಡ್ನಿ ಮಾರಲು ಸೋಫಿಯಾರನ್ನು ಈತ ಒಪ್ಪಿಸಿದ್ದಾನೆ. ನಾಲ್ಕನೆಯ ತರಗತಿಯವರೆಗೆ ಮಾತ್ರ ಕಲಿತಿರುವ ಸೋಫಿಯಾಳದಿಂದ ಯಾವ್ಯಾವುದೋ ದಾಖಲೆಗಳಿಗೆ ಆತ ಸಹಿ ಹಾಕಿಸಿಕೊಂಡಿದ್ದಾನೆ. ಸ್ವ ಇಚ್ಛೆಯಿಂದ ಮೂತ್ರಪಿಂಡ ದಾನ ಮಾಡುತ್ತಿರುವುದಾಗಿ ಒಪ್ಪಿಗೆ ಸೂಚಿಸುವ ದಾಖಲೆ ಅದಾಗಿವೆ.

ದಾಖಲೆಯನ್ನು ಸಿದ್ಧಪಡಿಸಿದ ಈತ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿ ತೆಗೆಸಿದ್ದಾನೆ. ಅದನ್ನು ಎಂಟು ಲಕ್ಷ ರೂಪಾಯಿಗೆ ಮಾರಾಟವೂ ಮಾಡಿದ್ದಾನೆ ರನೀಶ್. ಸಿಕ್ಕ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಈಕೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Related news

error: Content is protected !!