Monday, August 31, 2026
spot_imgspot_img
spot_imgspot_img

ಕಡಲೆಬೀಜ ಗಂಟಲಲ್ಲಿ ಸಿಲುಕಿ ಅಸುನೀಗಿದ 4 ವರ್ಷದ ಕಂದಮ್ಮ

- Advertisement -
- Advertisement -

ಕೊಚ್ಚಿ: ಕಡಲೆಬೀಜ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕಿ ತ್ವಾನಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕೊಯಿಕ್ಕೋಡ್​ನ ನಾರತ್​ ವೆಸ್ಟ್​ನಲ್ಲಿ ನಡೆದಿದೆ. ಮೃತ ತಾನ್ವಿ, ಪ್ರವೀಣ್​ ಮತ್ತು ಶರಣ್ಯಾ ದಂಪತಿಯ ಒಬ್ಬಳೇ ಮಗಳು.

ತ್ವಾನಿ ಕಣ್ಣೂರಿನ ಇಂಡಿಯನ್​ ಪಬ್ಲಿಕ್​ ಸ್ಕೂಲ್​ನ ಕಿಂಡರ್​ಗಾರ್ಡನ್​ ವಿದ್ಯಾರ್ಥಿನಿಯಾಗಿದ್ದಳು. ಇದ್ದ ಒಬ್ಬಳೆ ಮಗಳನ್ನು ಕಳೆದುಕೊಂಡ ದಂಪತಿ ಇದೀಗ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮಿಕ್ಸ್ಚರ್ ಸ್ನ್ಯಾಕ್​ ತಿನ್ನುವಾಗ ಅದರಲ್ಲಿದ್ದ ಕಡಲೆಬೀಜ ತಾನ್ವಿಯ ಗಂಟಲಲ್ಲಿ ಸಿಲುಕಿ ಉಸಿರಾಡಲು ಆಗದೇ ತಾನ್ವಿ ಕೊನೆಯುಸಿರೆಳೆದಿದ್ದಾಳೆ. ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ತಾನ್ವಿ ಮೃತಪಟ್ಟಿದ್ದಾಳೆ.

- Advertisement -

Related news

error: Content is protected !!