- Advertisement -
- Advertisement -
ಕೊಡಗು(ನ.14): ಮಕ್ಕಳ ದಿನಾಚರಣೆಯಂದೇ ಮೂವರು ಅಪರಿಚಿತ ಮಕ್ಕಳ ಮೃತದೇಹ ಹಾರಂಗಿ ಎಡದಂಡೆ ಬಳಿ ದೊರೆತಿದೆ.

ಕುಶಾಲನಗರ ಸಮೀಪದ ತೊರೆನೂರು ಬಳಿಯ ಹಾರಂಗಿ ಎಡದಂಡೆ ನಾಲೆಯಲ್ಲಿ ತೇಲಿಬರುತ್ತಿದ್ದ ಮೂರು ಶವಗಳನ್ನು ಸ್ಥಳೀಯರು ಮೇಲಿತ್ತಿದ್ದಾರೆ.

ಇಬ್ಬರು ಗಂಡುಮಕ್ಕಳು, ಒಂದು ಹೆಣ್ಣು ಮಗುವಿನ ಮೃತದೇಹವನ್ನು ಸ್ಥಳೀಯರು ನಾಲೆಯಿಂದ ಹೊರತೆಗೆದಿದ್ದಾರೆ. ಘಟನೆ ಹೇಗೆ ನಡೆದಿದೆ, ಮಕ್ಕಳು ಎಲ್ಲಿಯವರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಜಲಾಶಯಕ್ಕೆ ನೀರಿನ ಹರಿವನ್ನು ಸ್ಥಗಿತಗೊಳಿಸಿ ಶೋಧ ನಡೆಸಲಾಗುತ್ತಿದೆ.


- Advertisement -