Saturday, June 28, 2025
spot_imgspot_img
spot_imgspot_img

ದೇಗುಲಗಳಲ್ಲಿ ಗಂಟೆ ಕಳವು; ಒಂದೇ ಕುಟುಂಬದ ನಾಲ್ವರು ಅರೆಸ್ಟ್

- Advertisement -
- Advertisement -

ಒಂದೇ ಕುಟುಂಬದ ನಾಲ್ವರು ದೇಗುಲದ ಗಂಟೆ ಕಳವಿಗೆ ಇಳಿದು ಪೊಲೀಸರಿಗೆ ಅತಿಥಿಯಾದ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಗಂಟೆಗಳನ್ನು ಕಳವು ಮಾಡಿದ್ದ ನಾಲ್ವರುನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 750 ಕೆ.ಜಿ ತೂಕದ ವಿವಿಧ ಮಾದರಿಗಳ, ವಿವಿಧ ಲೋಹಗಳ ಗಂಟೆಗಳನ್ನು ಶಪಡಿಸಿಕೊಂಡಿದ್ದಾರೆ.

ಮೈಸೂರಿನ ಕೆಸರೆ ನಿವಾಸಿಗಳಾದ ಒಂದೇ ಕುಟುಂಬಕ್ಕೆ ಸೇರಿದ ಅಮ್ಜದ್ ಅಹಮ್ಮದ್ (37), ಸಮೀವುಲ್ಲಾ (22), ಜುಲ್ಫಿಕರ್ (36) ಹಾಗೂ ಹೈದರ್ (36) ಬಂಧಿತ ಆರೋಪಿಗಳು.

ಆರೋಪಿಗಳು ಕೊಡಗು, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಜನ ವಸತಿಯಿಂದ ದೂರ ಇರುವ ದೇಗುಲಗಳ ಗಂಟೆಗಳನ್ನು ಕಳವು ಮಾಡುತ್ತಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!