Saturday, May 4, 2024
spot_imgspot_img
spot_imgspot_img

ಫೇಸ್​ಬುಕ್ ​ನಲ್ಲಿ ಅಶ್ಲೀಲ ಚಾಟಿಂಗ್; ಪ್ಲ್ಯಾನ್ ಮಾಡಿ ಕರೆಸಿಕೊಂಡ ಯುವತಿಯಿಂದ ಧರ್ಮದೇಟು..!!

- Advertisement -G L Acharya panikkar
- Advertisement -

ಕೊಡಗು: ಫೇಸ್​ಬುಕ್​ನಲ್ಲಿ ಯುವತಿಯ ಹೆಸರಿನಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮೆಸೇಜ್​ ಮಾಡುತ್ತಿದ್ದ ಯುವಕನನ್ನು ಉಪಾಯವಾಗಿ ಕರೆಸಿಕೊಂಡು ಥಳಿಸಿ, ಪೊಲೀಸರ ವಶಕ್ಕೆ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಯುವಕ ಮಡಿಕೇರಿ ಸಮೀಪದ ಹಾಕತ್ತೂರಿನ ಅಶ್ರಪ್ ಎಂಬುವವನು ಕಳೆದ 15 ದಿನಗಳಿಂದ ಯುವತಿಯ ಹೆಸರಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಚಾಟಿಂಗ್​ ಮಾಡುತ್ತಿದ್ದು, ತನ್ನ ಹೆಸರು ಅರುಣಾ ಎಂದು ಹೇಳಿಕೊಂಡಿದ್ದ

ಆತನನ್ನು ಉಪಾಯವಾಗಿ ಮಡಿಕೇರಿ ಬಸ್​ ನಿಲ್ದಾಣಕ್ಕೆ ಕರೆಸಿಕೊಂಡು ಆತನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಸಿಕ್ಕಿಬಿದ್ದಾಗ ನನ್ನೊಟ್ಟಿಗೆ ಮತ್ತಿಬ್ಬರು ಇದ್ದಾರೆ ಎಂದು ಆರೋಪಿ ಮಾಹಿತಿ ನೀಡಿದ್ದು, ಇವನ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!