



ಕೊಡಂಗಾಯಿ: ಶಿಲ್ಪ ಶ್ರೀ ಯುವಕ ಮಂಡಲ(ರಿ.) ಕೊಡಂಗಾಯಿ ಇದರ ವತಿಯಿಂದ 79ನೇ ಸ್ವಾತಂತ್ರೋತ್ಸವನ್ನು ಶಿಲ್ಪ ಶ್ರೀ ಯುವಕ ಮಂಡಲದ ಕಚೇರಿಯ ಮುಂಭಾಗದಲ್ಲಿ ಆಚರಿಸಲಾಯಿತು.
ಹಿರಿಯ ಗೌರವ ಸಲಹೆಗಾರ ನಾರಾಯಣ ಭಟ್ ಪಳ್ಳಿಗದ್ದೆ, ಶಿಲ್ಪ ಶ್ರೀ ಯುವಕ ಮಂಡಲ ಅಧ್ಯಕ್ಷ ರೋಹಿತ್ ರೈ ಚೇಂಬರಡ್ಕ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ ಪೂರ್ಲಪ್ಪಾಡಿ ಇವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಟ್ಲ ಪಡ್ನೂರು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಪಂಚಾಯತ್ ಉಪಾಧ್ಯಕ್ಷೆ ಪ್ರೇಮಲತಾ, ಸದಸ್ಯರಾದ ನಾಗೇಶ್ ಶೆಟ್ಟಿ, ಸಂದೇಶ್ ಶೆಟ್ಟಿ, ಶ್ರೀಮತಿ ರೇಖಾ, ಶ್ರೀಮತಿ ಜಯಲಕ್ಷ್ಮಿ, ಶಿಲ್ಪ ಶ್ರೀ ಯುವಕ ಮಂಡಲದ ಖಜಾಂಜಿ ವಲ್ಲಭ ತಂತ್ರಿ ಕೊಡಂಗಾಯಿ, ಸದಸ್ಯರಾದ ಅರವಿಂದ ರೈ ಮೂರ್ಜೆಬೆಟ್ಟು, ತುಕ್ರಪ್ಪ ಗೌಡ ಮಾರುಗುಳಿ, ಹೇಮಾನಂದ ಕರ್ಕಳ, ಶಿಲ್ಪ ಶ್ರೀ ಯುವಕ ಮಂಡಲದ ಉಪಾಧ್ಯಕ್ಷ ರವಿ ಕಾಪಿಕಾಡ್, ಜೊತೆ ಕಾರ್ಯದರ್ಶಿ ನಿತ್ಯಾನಂದ ರೈ ಮಾರುಗುಳಿ, ಪ್ರಸನ್ನ ರೈ ಮಾರುಗುಳಿ, ಉಮೇಶ್ ಶೆಟ್ಟಿ ಕಾಪುಕೋಡಿ, ಜಯರಾಮ ಗೌಡ ಮಾರುಗುಳಿ, ಮೌರೀಶ್ ವೇಗಸ್, ಫ್ರೆಂಡ್ಸ್ ಕಾಪುಮಜಲು(ರಿ.) ಅಧ್ಯಕ್ಷ ವಿನಯ ಜೋಗಿ ಕಾಪುಮಜಲು ಮತ್ತು ಊರಿನ ನಾಗರಿಕ ಬಂಧುಗಳು ಉಪಸ್ಥಿತರಿದ್ದರು.

ಶಿಲ್ಪಶ್ರೀ ಯುವಕ ಮಂಡಲದ ಉಪಾಧ್ಯಕ್ಷ ಪ್ರಮೋದ್ ರೈ ಮಾರುಗುಳಿ ಸ್ವಾಗತಿಸಿ, ಸದಸ್ಯ ಪ್ರಕಾಶ್ ಶೆಟ್ಟಿ ತಾರಿಯಡ್ಕ ಧನ್ಯವಾದಗೈದರು.








