Thursday, July 23, 2026
spot_imgspot_img
spot_imgspot_img

ಕೋಡಪದವು ಶಾಲೆಯಲ್ಲಿ ಉಚಿತ ಆರೋಗ್ಯ ಶಿಬಿರ

- Advertisement -
- Advertisement -

ಕೋಡಪದವು: ದ.ಕ. ಹಿ. ಪ್ರಾ. ಶಾಲೆ, ಕೋಡಪದವು ಇಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸ್ಥಾಪಕ ಅಧ್ಯಕ್ಷರಾದ ಬಿ. ಸಂದೇಶ್ ಶೆಟ್ಟಿ ಬಿಕ್ನಾಜೆಯವರ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಜ.11ರಂದು ಆಯೋಜಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಉಮರ್ ಫಾರೂಕ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.


ಸ್ಥಳೀಯ ನಿವಾಸಿಗಳಾದ ಮಾಜಿ ಸೈನಿಕ ನಾಗರಾಜ್ ಕುಕ್ಕಿಲ ಹಾಗೂ ವಿಟ್ಲ ಪಡ್ನೂರು ಗ್ರಾಮದ ಮಾಜಿ ಅಧ್ಯಕ್ಷ ಅಬ್ದುಲ್ಲ ಕುಕ್ಕಿಲ ಅವರು ತೆಂಗಿನ ಗಿಡಕ್ಕೆ ನೀರೇರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಡಾ. ಸಮಂತ್ ಶೆಟ್ಟಿ ಅವರು ಶಿಬಿರದ ಮಹತ್ವದ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿ, ಅಬಾ ಕಾರ್ಡ್ ಮತ್ತು ಆಯುಷ್ಮಾನ್ ಭಾರತ್ ಕಾರ್ಡ್‌ಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಪ್ರಜ್ಞ ಸಲಹಾ ಕೇಂದ್ರದ ಪ್ರಾಂಶುಪಾಲೆ ಶ್ರೀಮತಿ ವಿಜಯ ಶೆಟ್ಟಿ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.


ವೇದಿಕೆಯಲ್ಲಿ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ ವಿಟ್ಲದ ವೈದ್ಯೆ ಸ್ವಸ್ತಿ ಸಂತೋಷ್ ಶೆಟ್ಟಿ ಹಾಗೂ ಯೆನೆಪೋಯ ವೈದ್ಯಕೀಯ ಸಂಸ್ಥೆಯ ಡಾ. ಅಪ್ಸಲ್ ಉಪಸ್ಥಿತರಿದ್ದರು.


ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸ್ಥಾಪಕ ಅಧ್ಯಕ್ಷ ಬಿ. ಸಂದೇಶ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿ, ಯೆನೆಪೋಯ ವೈದ್ಯಕೀಯ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿಗಳು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಪಿಎಚ್‌ಓ ಸೌಮ್ಯ,, ಸಿಎಚ್‌ಓ ನಿಂಗಪ್ಪ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ಶಾಲಾ ಮೇಲ್ವಿಚಾರಣಾ ಸಮಿತಿ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದರು.

- Advertisement -

Related news

error: Content is protected !!