Wednesday, July 2, 2025
spot_imgspot_img
spot_imgspot_img

ಕೊಳ್ನಾಡು ಬಿ ಜೆ ಪಿ ಮಹಾಶಕ್ತಿಕೇಂದ್ರದ ಸಭೆ

- Advertisement -
- Advertisement -

ಕೊಳ್ನಾಡು ಬಿಜೆಪಿ ಮಹಾಶಕ್ತಿಕೇಂದ್ರದ ಪ್ರಮುಖರ ಸಭೆಯು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಅನೆಯಾಲ ಗುತ್ತು ಇವರ ಅದ್ಯಕ್ಷತೆಯಲ್ಲಿ ಕುಡ್ತಮುಗೇರು ವಿಜಯಶ್ರೀ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕೊಳ್ನಾಡು ಮಹಾಶಕ್ತಿಕೇಂದ್ರದ ಚುನಾವಣಾ ಪ್ರಭಾರಿಗಳು, ಮಾಜಿ ಶಾಸಕರು ಆದ ಪದ್ಮನಾಭ ಕೊಟ್ಟಾರಿಯವರು ಗ್ರಾಮದ ವಾಸ್ತವಿಕ ಮಾಹಿತಿಯನ್ನು ಗ್ರಾಮದ ಪ್ರಮುಖ ಕಾರ್ಯಕರ್ತರಿಂದ ಪಡೆದು ಗ್ರಾಮ ಪಂಚಾಯತ್ ಚುನಾವಣೆಯನ್ನು ಯಾವ ರೀತಿ ಎದುರಿಸಬಹುದೆಂಬುದರ ಬಗ್ಗೆ ಸೂಕ್ತವಾದ ಮಾರ್ಗದರ್ಶನ ನೀಡಿದರು.

ಮುಂದಿನ ದಿನಗಳಲ್ಲಿ ನಡೆಯುವ ಪಕ್ಷದ ಸೇವಾ ಸಪ್ತಾಹ ಕಾರ್ಯಕ್ರಮ ಹಾಗೂ ಗ್ರಾಮ ಪಂಚಾಯತ್ ಚುನಾವಣಾ ಪೂರ್ವಸಿದ್ಧತೆಯ ಬಗ್ಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಬಗ್ಗೆ ಮಾಹಿತಿಯನ್ನು ಮಂಡಲ ಬಿಜೆಪಿ ಪ್ರಧಾನಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಹಾಗೂ ಡೊಂಬಯ್ಯ ಅರಳ ನೀಡಿದರು.

ಮಂಡಲ ಚುನಾವಣಾ ಸಹ ಪ್ರಭಾರಿಗಳಾದ ಪ್ರಭಾಕರ ಪ್ರಭು ಹಾಗೂ ಅಧ್ಯಕ್ಷತೆ ವಹಿಸಿದ್ದ ಕೊಳ್ನಾಡು ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿಯವರು ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸುವ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಕೊಳ್ನಾಡು ಮಹಾಶಕ್ತಿಕೇಂದ್ರ ಪ್ರಧಾನಕಾರ್ಯದರ್ಶಿ ಲೋಹಿತ್ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಜಯರಾಮ್ ನಾಯ್ಕ್ ಕುಂಟ್ರಕಲ, ಮಂಡಲ ರೈತ ಮೋರ್ಚಾ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಟ್ಟತ್ತಿಲ ಕೋಡಿ,ಮಂಡಲ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಶ್ರೀಲತಾ ಶೆಟ್ಟಿ ಪಟ್ಲ, ಪಕ್ಷದ ವಿವಿಧ ಜವಾಬ್ದಾರಿ ವಹಿಸಿಕೊಂಡಿರುವ ಪ್ರಮುಖರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಬೂತ್ ಅಧ್ಯಕ್ಷರು -ಪ್ರಧಾನಕಾರ್ಯದರ್ಶಿಗಳು ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

ಗಣೇಶ್ ಆಚಾರ್ಯ ಮಂಚಿ ಪ್ರಾರ್ಥನೆಗೈದರೆ, ಯೋಗೀಶ್ ಕುಂಟ್ರಕಲ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!