



ಆರ್‍ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ), ಪ್ರಮುಖ ಆರೋಪಿ ಸೇರಿ 7 ಮಂದಿಯ ಸುಳ್ಳು ಪತ್ತೆ ಪರೀಕ್ಷೆ (ಪಾಲಿಗ್ರಾಫ್ ಟೆಸ್ಟ್) ನಡೆಸಿದೆ.
ಒಂದೆಡೆ ಜೈಲಿನಲ್ಲಿ ಸಂಜಯ್ ರಾಯ್ ಪಾಲಿಗ್ರಾಫ್ ಪರೀಕ್ಷೆ ನಡೆದಿದೆ. ಉಳಿದ ಆರು ಮಂದಿಗೆ ಸಿಬಿಐ ಕಚೇರಿಯಲ್ಲಿ ಪರೀಕ್ಷೆ ನಡೆಯುತ್ತಿದೆ. ಇದರೊಂದಿಗೆ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‍ಗೂ ಪರೀಕ್ಷೆ ನಡೆಸಲಾಗಿದೆ.
ಶನಿವಾರ ಕೋಲ್ಕತ್ತಾಗೆ ಆಗಮಿಸಿದ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಬಿಐ ಅಧಿಕಾರಿಗಳ ವಿಶೇಷ ತಂಡ ಆರೋಪಿ ಸಂಜಯ್ ನೀಡಿದ ಹೇಳಿಕೆಗಳಲ್ಲಿ ಹಲವು ಅಸ್ಪಷ್ಟತೆ ಇದೆ. ಇದರಿಂದಾಗಿ ಆತನಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸುವ ಅಗತ್ಯತೆ ಇದೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಸುಪ್ರೀಂ ಕೋರ್ಟ್ 7 ಜನರ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಬಿಐಗೆ ಒಪ್ಪಿಗೆ ನೀಡಿತ್ತು ಎಂದು ತಿಳಿದುಬಂದಿದೆ.
ಪಾಲಿಗ್ರಾಫ್ ಪರೀಕ್ಷೆಯು ರಕ್ತದೊತ್ತಡ, ನಾಡಿ, ಉಸಿರಾಟ ಮತ್ತು ಚರ್ಮದ ವಾಹಕತೆಯಂತಹ ಹಲವಾರು ಶಾರೀರಿಕ ಸೂಚಕಗಳನ್ನು ಅಳೆಯುವ ಮತ್ತು ದಾಖಲಿಸುವ ಒಂದು ವಿಧಾನವಾಗಿದೆ. ವ್ಯಕ್ತಿಗೆ ಪ್ರಶ್ನೆಗಳ ಸರಣಿಯನ್ನು ಕೇಳಲಾಗುತ್ತದೆ. ಪರೀಕ್ಷೆಯ ಪ್ರಕಾರ, ಸುಳ್ಳು ಉತ್ತರಗಳು ಶಾರೀರಿಕ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತವೆ. ಈ ಮೂಲಕ ವಿಚಾರಣೆ ವೇಳೆ ಸುಳ್ಳು ಹೇಳುವುದನ್ನು ಪತ್ತೆ ಮಾಡಲಾಗುತ್ತದೆ.