Thursday, March 28, 2024
spot_imgspot_img
spot_imgspot_img

ಕೋಲ್ಕತ್ತಾ ವಿರುದ್ಧ ಗೆದ್ದ ಮುಂಬೈ

- Advertisement -G L Acharya panikkar
- Advertisement -

ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನೀಡಿದ 149 ರನ್ ಗಳ ಗುರಿಯನ್ನು ಬೆನ್ನತ್ತಿದ ರೋಹಿತ್ ಬಳಗ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.


ಮುಂಬೈ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಗಿಳಿದ ಕೆಕೆಆರ್ ಮುಂಬೈ ಬೌಲಿಂಗ್ ದಾಳಿಗೆ 5 ವಿಕೆಟ್ ನಷ್ಟಕ್ಕೆ 148 ರ ಸಾಧಾರಣ ಮೊತ್ತ ಪೇರಿಸಿ 149 ರ ಸವಾಲನ್ನು ಮುಂಬೈ ಪಡೆಗೆ ನೀಡಿತ್ತು. ಕೆಕೆಆರ್ 20 ಓವರ್‌ಗಳಲ್ಲಿ ಒಟ್ಟು 148/5 ರನ್ ಗಳಿಸಿದರು.


ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಮೊದಲ ಸುತ್ತಿನಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಜಯ ಸಾಧಿಸಿ ಹತ್ತು ಅಂಕಗಳನ್ನು ಗಳಿಸಿದೆ.


ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ (78*ರನ್, 44 ಎಸೆತ, 9 ಬೌಂಡರಿ, 3 ಸಿಕ್ಸರ್) ಸಾಹಸದಿಂದ ಐಪಿಎಲ್-13ರಲ್ಲಿ ಆರನೇ ಗೆಲುವು ದಾಖಲಿಸಿದ ರೋಹಿತ್ ಶರ್ಮ ಬಳಗ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ.

- Advertisement -

Related news

error: Content is protected !!