Sunday, June 14, 2026
spot_imgspot_img
spot_imgspot_img

ಇಡ್ಕಿದು: (ಜ.14-16) ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

- Advertisement -
- Advertisement -

ಇಡ್ಕಿದು: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವವು ಜ.14ರಿಂದ 16ರ ವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.

ಜ.8ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆಯಲಿದೆ. ಜ.13ರಂದು ಉಗ್ರಾಣ ಮುಹೂರ್ತ, ಜ.14ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹವನ ಪ್ರಾರಂಭ ಮಧ್ಯಾಹ್ನ ಗಣಪತಿ ಹವನ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಜ.15ರಂದು ಬೆಳಿಗ್ಗೆ ಗಂಟೆ 6ರಿಂದ ಸಂಜೆ ಗಂಟೆ 6ರ ವರೆಗೆ ಅರ್ಧ ಏಕಾಹ ಭಜನೆ ನಡೆಯಲಿದೆ. ಬೆಳಿಗ್ಗೆ ಗಂಟೆ 8 ರಿಂದ ಆಶ್ಲೇಷಾ ಬಲಿ ಪ್ರಾರಂಭಗೊಳ್ಳಲಿದೆ. ಬಳಿಕ ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಪಂಚಮಿ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಪ್ರಸಾದ ಭೋಜನ ನಡೆಯಲಿದೆ. ಜ.16ರಂದು ಕಿರುಷಷ್ಠಿ ಉತ್ಸವ ನಡೆಯಲಿದೆ. ದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಶ್ರೀ ಗಂಧ ಪ್ರಸಾದ, ಸ್ಥಳ ದೈವ ಪಿಲಿಚಾಮುಂಡಿ ನೇಮೋತ್ಸವ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಜ.20ರಂದು ಕೋಲ್ಪೆ ಭಂಡಾರ ಮನೆಯಿಂದ ಭಂಡಾರ ತೆಗೆಯುವುದು. ಜ.21ರಂದು ಬೆಳಿಗ್ಗೆ ಕೋಲ್ಪೆ ಮೂಲಸ್ಥಾನದಲ್ಲಿ ಶಿರಾಡಿ-ಜುಮಾದಿ ದೈವಗಳಿಗೆ ನೇಮೋತ್ಸವ ಮಧ್ಯಾಹ್ನ ಅನ್ನಸಂತರ್ಪಣೆ, ಜ.22ರಂದು ರಾತ್ರಿ ಕೋಲ್ಪೆ ಮೂಲಸ್ಥಾನದಿಂದ ಮಿತ್ತೂರು ರಾಮನಗರಕ್ಕೆ ದೈವಗಳ ಭಂಡಾರ ಹೋಗುವುದು, ಜ.23ರಂದು ಬೆಳಿಗ್ಗೆ ಮಿತ್ತೂರು ರಾಮನಗರದಲ್ಲಿ ಗಡಿನೇಮೋತ್ಸವ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ರಾಮನಗರ ಮಿತ್ತೂರಿನಿಂದ ಕೋಲ್ಪೆ-ಭಂಡಾರ ಮನೆಗೆ ದೈವಗಳ ಭಂಡಾರ ತೆರಳುವುದು, ಜ.26ರಂದು ರಾತ್ರಿ ಕೋಲ್ಪೆ ದೇವಸ್ಥಾನದಲ್ಲಿ ಗೊಂದೋಲು ಪೂಜೆ, ಜ.30ರಂದು ರಾತ್ರಿ ಮಾರಿಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!