Sunday, June 7, 2026
spot_imgspot_img
spot_imgspot_img

ಕೋಣಾಜೆ ವ್ಯಾಪ್ತಿಯಲ್ಲಿ ಗಾಂಜಾ ಸಾಗಾಟ ಪತ್ತೆ- 23 ಕೆಜಿ ವಶ

- Advertisement -
- Advertisement -

ಮಂಗಳೂರು(ನ.3): ಕೋಣಾಜೆ ವಾಪ್ತಿಯ ಮಂಜನಾಡಿ ಗ್ರಾಮದ ವಿಜಯನಗರದಲ್ಲಿ ನಡೆಯುತ್ತಿದ್ದ ಗಾಂಜಾ ಸಾಗಾಟ ಜಾಲವನ್ನು ಪತ್ತೆ ಹಚ್ಚಿರುವ ಪೊಲೀಸರು ಓರ್ವನನ್ನು‌ ಬಂಧಿಸಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಂಗಳೂರು ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿಯ ಅಬ್ದುಲ್ ಖಾದರ್ ತನ್ಸಿಫ್ ಯಾನೆ ತನ್ಸಿ (23) ಬಂಧಿತ ಆರೋಪಿ. ಈತ ಮಂಜನಾಡಿ ಗ್ರಾಮದ ವಿಜಯನಗರ ಎಂಬಲ್ಲಿ ಬೈಕ್​ನಲ್ಲಿ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದ. ಈತನಿಂದ 23 ಕೆ ಜಿ 480 ಗ್ರಾಂ ತೂಕದ ಗಾಂಜಾ ಪ್ಯಾಕೆಟ್ ಹಾಗೂ ಗಾಂಜಾ ಸಾಗಾಟ ಮಾಡಲು ಉಪಯೋಗಿಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಳ್ಳಲಾದ ಗಾಂಜಾದ ಮೌಲ್ಯ 2 ಲಕ್ಷ 34 ಸಾವಿರದ 800 ಎಂದು ಅಂದಾಜಿಸಲಾಗಿದೆ. ಮಂಗಳೂರಿನ ಕೋಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ಎಕಾನಮಿಕ್ ಆ್ಯಂಡ್ ನಾರ್ಕೋಟಿಕ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

- Advertisement -

Related news

error: Content is protected !!