- Advertisement -
- Advertisement -



ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಗೋಪುರು ಕುಸಿದಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ತಾಂಡಾದಲ್ಲಿ ನಡೆದಿದೆ.
ಕೊಪ್ಪಳದ ಹಲವಡೆ ಇಂದು ಗುಡುಗು-ಸಿಡಿಲು ಸಹಿತ ಬಾರೀ ಮಳೆಯಾಗಿದೆ. ಹೀಗಾಗಿ ತಾಂಡಾದಲ್ಲಿರುವ ತುಳಜಾಭವಾನಿ ದೇವಸ್ಥಾನದ ಗೋಪುರಕ್ಕೆ ಇಂದು ಸಂಜೆ ಸಿಡಿಲು ಬಡೆದಿದ್ದು, ಗೋಪುರದ ಮೇಲ್ಬಾಗ ಸಂಪೂರ್ಣ ಕುಸಿದಿದೆ. ಗೋಪುರು ಕುಸಿದಿದ್ದರಿಂದ ಗ್ರಾಮದ ಜನರು ಆತಂಕ್ಕೊಳಗಾಗಿದ್ದಾರೆ
- Advertisement -