- Advertisement -
- Advertisement -
ಬೆಂಗಳೂರು: ನಾಳೆ ರಾತ್ರಿ 8ಗಂಟೆಯಿಂದ ಬೆಂಗಳೂರಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿರುವ ಹಿನ್ನಲೆಯಲ್ಲಿ ಸಾವಿರಾರು ಮಂದಿ ಸಿಲಿಕಾನ್ ಸಿಟಿ ತೊರೆದು ತಮ್ಮೂರಿನತ್ತ ಮುಖ ಮಾಡುತ್ತಿದ್ದಾರೆ. ಬೆಳ್ಳಂಬೆಳಿಗ್ಗೆ ಮನೆ ಖಾಲಿ ಮಾಡಿಕೊಂಡು ಸಾವಿರಾರು ಮಂದಿಗೆ ತಮ್ಮ ಊರುಗಳಿಗೆ ವಾಪಸ್ ಹೊರಟಿದ್ದಾರೆ. ಹೀಗಾಗಿ ತುಮಕೂರು ಟೋಲ್ ಗೇಟ್ , ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಈಗಾಗಲೇ ಅನೇಕ ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕಾರು, ಬೈಕ್, ಟೆಂಪೋ ಸೇರಿದಂತೆ ವಿವಿಧ ವಾಹನಗಳಲ್ಲಿ ಸಿಕ್ಕ ಸಿಕ್ಕ ವಾಹನ ಹತ್ತಿ ಜನರು ಊರಿನತ್ತ ತೆರಳುತ್ತಿದ್ದಾರೆ. ನಾಳೆ ಲಾಕ್ ಡೌನ್ ಜಾರಿಯಾದ ಬಳಿಕ ಬಸ್ ಗಳು ರೋಡಿಗಿಳಿಯಲ್ಲ. ಹೀಗಾಗಿ ಇಂದೇ ಜನರು ಬೆಂಗಳೂರು ತೊರೆದು ಊರು ಕಡೆಗೆ ಮುಖಮಾಡುತ್ತಿದ್ದಾರೆ.

- Advertisement -